ತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್ ವೈರಲ್ ಆಯ್ತು ಫೋಟೊ
ಜಾಗತಿಕ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಆಗಸ್ಟ್ 15 ರಂದು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಶಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಅಭಿಮಾನಿಗಳು ಅವರ ಹಿಂದೆ ಗೋಡೆಯ ಮೇಲೆ ನೇತಾಡುತ್ತಿದ್ದ 7ನೇ ಸಂಖ್ಯೆಯ ಜೆರ್ಸಿಯನ್ನು ನೋಡಿದ್ದಾರೆ. ಮಾಜಿ ಭಾರತೀಯ ನಾಯಕ ಮಹೇಂದ್ರ ಸಿಂಗ್ ಧೋನಿಯವರ 7ನೇ ಸಂಖ್ಯೆಯ ಜೆರ್ಸಿಯನ್ನು ರೊನಾಲ್ಡೋ ತಮ್ಮ ಮನೆಯ ಗೋಡೆಯ ಮೇಲೆ ನೇತು ಹಾಕಿದ್ದಾರೆ ಎಂದು ಅಭಿಮಾನಿಗಲು ಚರ್ಚೆ ಶುರು ಮಾಡಿದ್ದಾರೆ.
ರೊನಾಲ್ಡೊ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದು, 635 ಮಿಲಿಯನ್ ಮಂದಿ ಅವರನ್ನು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ. X ನಲ್ಲಿ ಸುಮಾರು 113 ಮಿಲಿಯನ್ ಜನರು ಅವರನ್ನು ಫಾಲೋ ಮಾಡುತ್ತಿದ್ದು, ಈ ಒಂದು ಪೋಸ್ಟ್ ಅಭಿಮಾನಿಗಳನ್ನು ಹುಚ್ಚೆದ್ದು ಖುಷಿ ಪಡುವಂತೆ ಮಾಡಿದ್ದಾರೆ.
ಇದು ಅಭಿಮಾನಿಗಳಿಗೆ ಕೇವಲ ಒಂದು ಸಂಖ್ಯೆ ಅಷ್ಟೆ ಅಲ್ಲ, ಇದು ಒಂದು ಭಾವನೆ.
ಆದರೆ ನಿಜವಾಗಿಯೂ ರೊನಾಲ್ಡೋ ಅವರ ಮನೆಯ ಗೋಡೆಯ ಮೇಲೆ ಮಹೇಂದ್ರ ಸಿಂಗ್ ಧೋನಿ ಅವರ ಜೆರ್ಸಿಯನ್ನು ನೇತುಹಾಕಿದ್ದಾರಾ ಆ 7ನೇ ನಂಬರ್ ಜೆರ್ಸಿಯನ್ನು ನೇತು ಹಾಕಿದ್ದಾರಾ ಎಂದರೆ, ಇಲ್ಲ ಅಷ್ಟಕ್ಕೂ ಆ 7 ನೇ ಸಂಖ್ಯೆಯ ಜೆರ್ಸಿ ರೋನಾಲ್ಡೋ ಅವರದ್ದೇ. ಸ್ಟಾರ್ ಫುಟ್ಬಾಲ್ ಆಟಗಾರ ಎರಡು ದಶಕಗಳಿಂದಲೂ 7ನೇ ನಂಬರ್ ಜರ್ಸಿಯನ್ನು ಧರಿಸುತ್ತಿದ್ದಾರೆ.
2003 ರಿಂದ 2009 ರವರೆಗೆ ಮ್ಯಾಂಚೆಸ್ಟರ್ ಯುನೈಟೆಡ್‌ನಲ್ಲಿ ಅವರ ಅಧಿಕಾರಾವಧಿಯಲ್ಲಿ 7 ನೇ ಸಂಖ್ಯೆಯೊಂದಿಗಿನ ರೊನಾಲ್ಡೊ ಅವರ ಒಡನಾಟವು ಪ್ರಾರಂಭವಾಯಿತು. ಅವರು ಆರಂಭದಲ್ಲಿ ರಿಯಲ್ ಮ್ಯಾಡ್ರಿಡ್‌ನಲ್ಲಿ 9 ನೇ ಸಂಖ್ಯೆಯನ್ನು ಧರಿಸಿದ್ದರೂ, ಶೀಘ್ರದಲ್ಲೇ ಅವರು ತಮ್ಮ ಸಾಂಪ್ರದಾಯಿಕ ಸಂಖ್ಯೆ 7ಕ್ಕೆ ಮರಳಿದರು.
ಎಂಎಸ್ ಧೋನಿ ಅವರು ತಮ್ಮ ಚೊಚ್ಚಲ ಪಂದ್ಯದಿಂದಲೂ 7 ನೇ ಸಂಖ್ಯೆಯ ಜೆರ್ಸಿಗೆ ಸಮಾನಾರ್ಥಕರಾಗಿದ್ದಾರೆ. ಅವರ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು, BCCI 2023 ರಲ್ಲಿ 7 ನೇ ಸಂಖ್ಯೆಯ ಜೆರ್ಸಿಯನ್ನು ನಿವೃತ್ತಿಗೊಳಿಸಿದೆ, ಇದರಿಂದಾಗಿ ಯಾವುದೇ ಭಾರತೀಯ ಆಟಗಾರನು ಈ ಸಂಖ್ಯೆಯನ್ನು ಮತ್ತೆ ಧರಿಸುವಂತಿಲ್ಲ.