ಎರಡು ತಿಂಗಳ ಹಿಂದಷ್ಟೇ ಖ್ಯಾತ ನಟಿ ಗರ್ಭಪಾತ : ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಈ ಸ್ಟಾರ್ ಹಿರೋಯಿನ್ ಬಗ್ಗೆ ವಿಮರ್ಶಕನ ಪೋಸ್ಟ್ !
ರಶ್ಮಿಕಾ ಮಂದಣ್ಣ ದಕ್ಷಿಣ ಸೇರಿದಂತೆ ಬಾಲಿವುಡ್ ನಲ್ಲೂ ಹೆಸರು ಮಾಡಿರುವ ನಟಿ. ಒಂದಿಲ್ಲೊಂದು ವಿಚಾರಕ್ಕೆ ಸಂಬಂಧಿಸಿದಂತೆ ಸದಾ ಸುದ್ದಿಯಲ್ಲಿರುತ್ತಾರೆ. ಸುದ್ದಿಯಲ್ಲಿದ್ದಾರೆ.
ಇದೀಗ ಇವರಿಗೆ ಸಂಬಂಧಿಸಿದಂತೆ ಸಿನಿ ವಿಮರ್ಶಕ ಉಮರ್ ಸಂಧು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ನ್ಯಾಷನಲ್ ಕ್ರುಶ್ ಆಗಿರುವ ರಶ್ಮಿಕಾ ಎರಡು ತಿಂಗಳ ಹಿಂದೆ ಗರ್ಭಪಾತ ಮಾಡಿಸಿಕೊಂಡಿದ್ದಾರೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಉಮರ್ ಸಂಧು ಬರೆದುಕೊಂಡಿದ್ದಾರೆ.
ಬಾಲಿವುಡ್ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಟ್ವೀಟ್ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದೆಡೆ ಈ ಸುದ್ದಿ ಬಗ್ಗೆ ರಾಷ್ಮಿಕಾ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.
ನಟಿಯ ಜನಪ್ರಿಯತೆ ಹಾಳು ಮಾಡುವುದೇ ಕೆಲವರ ಉದ್ದೇಶ. ಹೀಗಾಗಿ ಸುಖಾ ಸುಮ್ಮನೆ ಸುದ್ದಿ ಹಬ್ಬಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಈ ಪೋಸ್ಟ್ ಅನ್ನು ಡಿಸೆಂಬರ್ 14 ರಂದೇ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಲ್ಲದೆ, ಅದನ್ನು ರಶ್ಮಿಕಾ ಮತ್ತು ವಿಜಯ ದೇವರ ಕೊಂಡ ಅವರಿಗೆ ಟ್ಯಾಗ್ ಬೇರೆ ಮಾಡಲಾಗಿದೆ.
ಆದರೆ ಇಲ್ಲಿವರೆಗೆ ರಶ್ಮಿಕಾ ಆಗಲಿ ವಿಜಯ ದೇವರಕೊಂಡ ಆಗಲಿ ಅಥವಾ ಅವರ ತಂಡದವರಾಗಲೀ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಎಬ್ಬಿಸಿರುವ ಬಿರುಗಾಳಿ ನೋಡಿದರೆ, ಇಂಥ ಪೋಸ್ಟ್ ಹಂಚಿಕೊಂಡವರ ವಿರುದ್ದ ರಶ್ಮಿಕಾ ಕ್ರಮ ಕೈಗೊಂಡರೂ ಆಶ್ಚರ್ಯ ಇಲ್ಲ.