ಮನೆಯ ಮುಂದೆ ಕಾಗೆ ಕೂಗುವುದರ ಸಂಕೇತ ಏನು ಗೊತ್ತಾ? ಇದು ಶುಭವೋ ಅಥವಾ ಅಶುಭವೋ?

Sun, 01 Sep 2024-2:36 pm,

ಕೆಲವೊಮ್ಮೆ ಕಾಗೆಗಳು ಮನೆಯ ಎದುರು ಒಂದೇ ಸಮನೆ ಕೂಗಲು ಆರಂಭಿಸುತ್ತವೆ. ಕೆಲವರು ಇದನ್ನು ಶುಭ ಎಂದು ಭಾವಿಸುತ್ತಾರೆ, ಇನ್ನೂ ಕೆಲವರು ಇದನ್ನೂ ಅಶುಭದ ಸಂಕೇತ ಎನ್ನುತ್ತಾರೆ. 

ಭಾರತೀಯ ಸಂಸ್ಕೃತಿಯಲ್ಲಿ, ಪ್ರಾಣಿಗಳು ಮತ್ತು ಪಕ್ಷಿಗಳ ನಡವಳಿಕೆ ಮತ್ತು ಅವುಗಳ ಶಬ್ದಗಳು ಬಹಳ ಮುಖ್ಯವಾದ ಸ್ಥಾನವನ್ನು ಹೊಂದಿವೆ. ಏಕೆಂದರೆ ಈ ಪಕ್ಷಿಯು ನಮ್ಮ ಸುತ್ತಲಿನ ಪರಿಸರದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ. ಅದರಲ್ಲೂ ಕಾಗೆಗಳು ಕೂಗುವುದನ್ನು ಕೆಲವರು ಅಶುಭ ಎಂದು ಭಾವಿಸುತ್ತಾರೆ.

ಮನೆಯ ಎದುರು ಕಾಗೆ ಕೂಗುವುದು ಶುಭವೋ ಅಥವ ಅಶುಭವೋ? ಕಾಗೆಗಳ ಕೂಗು ಒಳ್ಳೆಯದು ಎಂದು ಹೇಳಲಾಗುತ್ತದೆ. ಇನ್ನೂ ಕೆಲವರು ಇದನ್ನು ಅಶುಭ ಎನ್ನುತ್ತಾರೆ.  ನಮ್ಮ ಮನೆಯ ಮುಂದೆ ಕಾಗೆಗಳು ಕೂಗುವುದು ನಮ್ಮ ಜೀವನದಲ್ಲಿ ಏನಾದರೂ ಅನಾಹುತ ಸಂಭವಿಸಲಿದೆ ಎಂಬುದರ ಸಂಕೇತವೆಂದು ಪರಿಗಣಿಸಲಾಗುತ್ತದೆ.   

ಹಣ ಕಾಸಿನಲ್ಲಿ ಲಾಭ ಲವೊಮ್ಮೆ ಕಾಗೆಗಳ ಕೂಗು ಹಣದ ಲಾಭವನ್ನು ಸೂಚಿಸುತ್ತದೆ. ಸೂರ್ಯೋದಯದಲ್ಲಿ ಕಾಗೆಗಳು ಕೂಗುವುದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಜೀವನದಲ್ಲಿ ಆರ್ಥಿಕ ಪ್ರಗತಿಯನ್ನು ಸೂಚಿಸುತ್ತದೆ. ಇದು ನಿಮಗೆ ಶೀಘ್ರದಲ್ಲೇ ಸಂಪತ್ತನ್ನು ನೀಡುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.   

ಅತಿಥಿಯ ಆಗಮನ  ಮನೆಯ ಆವರಣದಲ್ಲಿ ಅಥವಾ ಮನೆಯ ಮೇಲ್ಛಾವಣಿಯಲ್ಲಿ ಕಾಗೆ ಕೂಗಿದರೆ.. ನಿಮ್ಮ ಮನೆಗೆ ಯಾರೋ ಅತಿಥಿಗಳು ಬರುತ್ತಿರುವ ಸಂಕೇತವೆಂದು ಪರಿಗಣಿಸಲಾಗುತ್ತದೆ. ಭಾರತೀಯ ಸಂಪ್ರದಾಯಗಳಲ್ಲಿ, ಅತಿಥಿಗಳ ಆಗಮನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಅತಿಥಿಗಳನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ.

ಕೆಟ್ಟ ಶಕುನ  ಕಾಗೆಯು ಇದ್ದಕ್ಕಿದ್ದಂತೆ ಜೋರಾಗಿ ಕಿರುಚಿದರೆ, ಅದನ್ನೂ ಬಹಳ ಸಮಯದ ವೆರಗೂ ಮುಂದುವರೆಸಿದರೆ. ಇದು ಸಂಕಟ ಅಥವಾ ಬಿಕ್ಕಟ್ಟಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದವರು ಎಚ್ಚರಿಕೆಯಿಂದ ಇರುವುದು ಉತ್ತಮ. ಏಕೆಂದರೆ ಇದು ಅಶುಭ ಘಟನೆಯನ್ನು ಸೂಚಿಸುತ್ತದೆ.

ಸಾವಿನ ಸಂಕೇತ ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಅಥವಾ ಹತ್ತಿರದಲ್ಲಿ ಕಾಗೆ ಪದೇ ಪದೇ ಕೂಗುವುದು ಹತ್ತಿರದ ಸಂಬಂಧಿಯ ಸಾವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶಕುನಶಾಸ್ತ್ರದಲ್ಲಿ ಇದನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಇದು ಅತ್ಯಂತ ಅಪಾಯಕಾರಿ ಚಿಹ್ನೆ.

ಸಂಕಟ ಮತ್ತು ಜಗಳ ಕಾಗೆಗಳ ಪುನರಾವರ್ತಿತ ಕೂಗು ಮನೆಯಲ್ಲಿ ವಿವಾದ ಮತ್ತು ಜಗಳಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಮನೆಯ ಕುಟುಂಬದ ಸದಸ್ಯರ ನಡುವೆ ಜಗಳಗಳು ಅಥವಾ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇದು ಮನೆಯ ವಾತಾವರಣವನ್ನು ಹಾಳು ಮಾಡುತ್ತದೆ.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link