`ಇದೇ ಸತ್ಯ.. ಆದ್ರೆ ಹೇಳುವ ಧೈರ್ಯ ನನಗಿಲ್ಲ`: ಮಗ-ಸೊಸೆ ಡಿವೋರ್ಸ್ ವದಂತಿ ಮಧ್ಯೆ ಕಣ್ಣೀರಿಡುತ್ತಾ ಅಮಿತಾಬ್ ಬಚ್ಚನ್ ಹೇಳಿದ್ದೇನು?
ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಬಚ್ಚನ್, ನಟನೆಯಷ್ಟೇ ಅಲ್ಲದೆ ನಿರೂಪಣಾ ಶೈಲಿಯಲ್ಲೂ ಎತ್ತಿದ ಕೈ ಎಂಬುದನ್ನು ಕೌನ್ ಬನೇಗಾ ಕರೋಡ್ʼಪತಿ ಸೀಸನ್ ಮೂಲಕ ತೋರಿಸಿಕೊಟ್ಟಿದ್ದಾರೆ.
ಇನ್ನು ಈ ಕಾರ್ಯಕ್ರಮದ ಸೆಟ್ʼನಿಂದ ಆಗಾಗ್ಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅಂದಹಾಗೆ ಪ್ರಸ್ತುತ ಬಾಲಿವುಡ್ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿದ್ದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಹೇಳಿಕೆ ವೈರಲ್ ಆಗಿದೆ.
ಈ ಎಲ್ಲದರ ಮಧ್ಯೆ ಅಮಿತಾಬ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗಿದೆ.
ಅಷ್ಟಕ್ಕೂ ಈ ಪೋಸ್ಟ್ ಕೌನ್ ಬನೇಗಾ ಕರೋಡ್ಪತಿ ಸೀಸನ್ʼಗೆ ಸಂಬಂಧಿಸಿದ್ದು. ಬಾಲಿವುಡ್ ಸೂಪರ್ಸ್ಟಾರ್ ತಮ್ಮ ಎಕ್ಸ್ ಹ್ಯಾಂಡಲ್ʼನಲ್ಲಿ ಬ್ಲಾಕ್ ಆಂಡ್ ವೈಟ್ ಫೋಟೋ ಶೇರ್ ಮಾಡಿಕೊಂಡು ಹೀಗೊಂದು ಪೋಸ್ಟ್ ಶೇರ್ ಮಾಡಿದ್ದಾರೆ.
“ನಾವು ಈಗ ಹೊರಡುತ್ತಿದ್ದೇವೆ. ನಾಳೆಯಿಂದ ಈ ವೇದಿಕೆಯಲ್ಲಿ ಮುಂದುವರೆಯುವುದಿಲ್ಲ. ನಾಳೆಯಿಂದ ಇಲ್ಲಿಗೆ ಬರಲು ಸಾಧ್ಯವಾಗುವುದಿಲ್ಲ. ಇದೇ ಸತ್ಯ. ಆದರೆ ಇದನ್ನು ಹೇಳುವ ಧೈರ್ಯವನ್ನು ನಾನು ಹೊಂದಿಲ್ಲ. ನಾನು, ಅಮಿತಾಬ್ ಬಚ್ಚನ್... ಈ ವೇದಿಕೆಯಿಂದ ಕೊನೆಯ ಬಾರಿಗೆ ಶುಭ ರಾತ್ರಿ ಹೇಳಲಿದ್ದೇನೆ" ಎಂದು ಕಣ್ಣೀರಿಟ್ಟಿದ್ದಾರೆ.
ಅಮಿತಾಬ್ ಬಚ್ಚನ್ ಅವರು 2000ರಲ್ಲಿ KBC ಯ ಪ್ರಾರಂಭದಿಂದಲೂ ನಿರೂಪಕರಾಗಿದ್ದಾರೆ. ಮೂರನೇ ಸೀಸನ್ ಹೊರತುಪಡಿಸಿ, ಉಳಿದೆಲ್ಲಾ ಸೀಸನ್ ಬಿಗ್ ಬಿ ನಡೆಸಿಕೊಟ್ಟಿದ್ದರು.
ಇನ್ನೊಂದೆಡೆ ಈ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ. ಅಭಿಷೇಕ್ ಬಚ್ಚನ್ ವಿಚ್ಛೇದನದ ಪೋಸ್ಟ್ʼವೊಂದಕ್ಕೆ ಲೈಕ್ ಮಾಡಿದ್ದೇ ತಡ, ಇವರ ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳೆಲ್ಲಾ ಮುನ್ನೆಲೆಗೆ ಬರುತ್ತಿದೆ.