CSK ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಪತ್ನಿ ಯಾರು ಗೊತ್ತಾ? ಈಕೆಯೂ ಕ್ರಿಕೆಟರ್… ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಪ್ಲೇಯರ್!
ನಾವಿಂದು ಈ ವರದಿಯಲ್ಲಿ ಧೋನಿಯ ಉತ್ತರಾಧಿಕಾರಿ ಎಂದು ಪರಿಗಣಿಸಲಾದ, CSK ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಪತ್ನಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
ರುತುರಾಜ್ ಗಾಯಕ್ವಾಡ್ ಅವರ ಪತ್ನಿ ಉತ್ಕರ್ಷ ಪವಾರ್. ಈಕೆ ಗಂಡನಂತೆ ಕ್ರಿಕೆಟ್ ಪ್ಲೇಯರ್. ಹಲವು ಹಂತಗಳಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದಾರೆ.
ಉತ್ಕರ್ಷ ಆಲ್ ರೌಂಡರ್ ಆಗಿದ್ದು, 2015 ರಿಂದ 2018 ರವರೆಗೆ ಮಹಾರಾಷ್ಟ್ರ ಪಶ್ಚಿಮ ವಲಯ ಅಂಡರ್-19 ಮತ್ತು ಪಶ್ಚಿಮ ವಲಯ ಅಂಡರ್-23 ಅನ್ನು ಪ್ರತಿನಿಧಿಸಿದ್ದರು. ಅಂದಹಾಗೆ ಟೀಮ್ ಇಂಡಿಯಾ ಸಿ ಪರ ಉತ್ಕರ್ಷ ಆಡಿದ್ದಾರೆ.
ಇದಲ್ಲದೇ ಉತ್ಕರ್ಷ 23 ವರ್ಷದೊಳಗಿನವರ ಚಾಲೆಂಜರ್ ಟ್ರೋಫಿಯನ್ನೂ ಆಡಿದ್ದರು. ಇನ್ನು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಪವಾರ್ ಅವರ ಹೆಸರು ಕಾಣಿಸಿಕೊಂಡಿದ್ದು, ಅವರ ಮೂಲ ಬೆಲೆ 10 ಲಕ್ಷ ರೂ. ಆಗಿತ್ತು. ಆದರೆ ದುರದೃಷ್ಟವಶಾತ್ ಅವರನ್ನು ಯಾವ ಫ್ರಾಂಚೈಸಿ ಕೂಡ ಖರೀದಿಸಿರಲಿಲ್ಲ.
ಉತ್ಕರ್ಷ ತನ್ನ ವಿದ್ಯಾಭ್ಯಾಸವನ್ನು ಪುಣೆಯಲ್ಲಿ ಮುಗಿಸುತ್ತಿದ್ದಾರೆ.