CSK New Captain ರುತುರಾಜ್ ಗಾಯಕ್ವಾಡ್ ಪತ್ನಿ ಯಾರು ಗೊತ್ತಾ? ಪತಿಯಂತೆ ಈಕೆಯೂ ಭಾರತೀಯ ಕ್ರಿಕೆಟರ್
CSK ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ 2023ನಲ್ಲಿ ಭಾರತದ ತಂಡದಲ್ಲಿ ಸ್ಟ್ಯಾಂಡ್‌ಬೈ ಆಟಗಾರರಲ್ಲಿ ಒಬ್ಬರಾಗಿದ್ದರು..
ಇನ್ನು IPL 2024ರ 17 ನೇ ಸೀಸನ್ ಆರಂಭಕ್ಕೆ ಕೆಲವೇ ಗಂಟೆಗಳು ಮಾತ್ರ ಉಳಿದಿವೆ.. ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ನಡೆಯಲಿದೆ.
ಇದೇ ವೇಳೆ CSK ತಂಡ ನಿನ್ನೆಯಷ್ಟೇ ದೊಡ್ಡ ಘೋಷಣೆಯೊಂದನ್ನು ಮಾಡಿದ್ದು.. ಧೋನಿ ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ದಾರೆ.. ಆ ನಾಯಕನ ಜಾಗಕ್ಕೆ ರುತುರಾಜ್ ಗಾಯಕ್ವಾಡ್ ಆಯ್ಕೆಯಾಗಿದ್ದಾರೆ..
ಸದ್ಯ ರುತುರಾಜ್ ಗಾಯಕ್ವಾಡ್ ಅವರ ಪತ್ನಿಯ ಕುರಿತಾದ ಮಾಹಿತಿಗಳು ಸಾಕಷ್ಟು ಹರಿದಾಡುತ್ತಿವೆ.. ಈ ಆರಂಭಿಕ ಆಟಗಾರನ ಪತ್ನಿ ಉತ್ಕರ್ಷ ಅಮರ್ ಪವಾರ್ ಮೂಲತಃ ಪುಣೆಯಿಂದ ಬಂದವರು.. ಇವರು ಮಹಾರಾಷ್ಟ್ರ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ.. ಇವರನ್ನು ಬಲಗೈ ಬ್ಯಾಟರ್ ಎಂದು ಕರೆಯಲಾಗುತ್ತದೆ..
ಉತ್ಕರ್ಷ ಜನಿಸಿದ್ದು 13, 1998 ರಂದು.. 11 ನೇ ವಯಸ್ಸಿನಲ್ಲಿ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟು ವೃತ್ತಿಪರವಾಗಿ ಕ್ರಿಕೆಟ್‌ನ್ನು ಆಯ್ಕೆ ಮಾಡಿಕೊಂಡರು. ವರದಿಗಳ ಪ್ರಕಾರ ಸದ್ಯ ಉತ್ಕರ್ಷ ಪ್ರಸ್ತುತ ಪುಣೆಯ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಅಂಡ್ ಫಿಟ್‌ನೆಸ್ ಸೈನ್ಸಸ್‌ನಲ್ಲಿ (INFS) ಅಧ್ಯಯನವನ್ನು ಮುಂದುವರೆಸಿದ್ದಾರೆ ಎನ್ನಾಲಾಗಿದೆ.