ಸೌತೆಕಾಯಿ ರಸಕ್ಕೆ ಇದನ್ನು ಬೆರೆಸಿ ಕುಡಿದರೆ ಸಾಕು.. ಬ್ಲಡ್ ಶುಗರ್ ಕೂಡಲೇ ಕಂಟ್ರೋಲ್ ಆಗುವುದು
ಸೌತೆಕಾಯಿ ಪೌಷ್ಟಿಕ ತರಕಾರಿ. ಸೌತೆಕಾಯಿಯಲ್ಲಿ ವಿಟಮಿನ್ ಕೆ, ವಿಟಮಿನ್ ಸಿ, ಮೆಗ್ನೀಸಿಯಮ್, ಫಾಸ್ಫರಸ್, ರಿಬೋಫ್ಲಾವಿನ್, ಬಿ-6, ಫೋಲೇಟ್, ಕಬ್ಬಿಣ, ಸಿಲಿಕಾ, ಕ್ಯಾಲ್ಸಿಯಂ ಮತ್ತು ಸತುವಿನಂತಹ ಪೋಷಕಾಂಶಗಳಿವೆ.
ಸೌತೆಕಾಯಿಯಲ್ಲಿ ತೂಕ ಇಳಿಸಲು ಸಹಾಯ ಮಾಡುವ ಅನೇಕ ಸಂಯುಕ್ತಗಳಿವೆ. ಸೌತೆಕಾಯಿ ರಸವು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದನ್ನು ಪ್ರತಿನಿತ್ಯ ಕುಡಿಯುವುದರಿಂದ ತೂಕ ಬಹುಬೇಗನೆ ಕಡಿಮೆಯಾಗುತ್ತದೆ.
ಸೌತೆಕಾಯಿಯು ಆಕ್ಸಿಡೇಟಿವ್ ಒತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಮಧುಮೇಹದಿಂದ ಬಳಲುತ್ತಿರುವವರು ಇದನ್ನು ಕುಡಿಯುವುದು ಪ್ರಯೋಜನಕಾರಿಯಾಗಿದೆ.
ಹಸಿರು ಫ್ರೆಶ್ ಸೌತೆಕಾಯಿ ತೆಗೆದುಕೊಂಡು ತುಂಡುಗಳಾಗಿ ಕತ್ತರಿಸಿ. ಇದಕ್ಕೆ ಸ್ವಲ್ಪ ನೀರು ಬೆರೆಸಿ ಜ್ಯೂಸ್ ಮಾಡಿಕೊಳ್ಳಿ. ಈಗ ಇದಕ್ಕೆ ಚಿಟಿಕೆ ಕರಿಮೆಣಸಿನ ಪುಡಿ ಬೆರೆಸಿ ಕುಡಿಯಿರಿ.
ಸೌತೆಕಾಯಿ ರಸ ಸೇವನೆಯಿಂದ ಬ್ಲಡ್‌ಶುಗರ್ ಲೆವಲ್ ನಿಯಂತ್ರಣದಲ್ಲಿರುತ್ತದೆ. ಮಧುಮೇಹಿಗಳಿಗೆ ಕರಿಮೆಣಸು ಕೂಡ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.