ತೂಕ ಇಳಿಕೆಗಾಗಿ ಯಾವುದೇ ಕಸರತ್ತು ಬೇಡ.. ಸೌತೇಕಾಯಿ ಸೇವಿಸಿ ಸಾಕು..!!
Cucumber For Weight loss: ಅನೇಕರು ಸೌತೆಕಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಇವುಗಳನ್ನು ತಿನ್ನುವುದರಿಂದ ದೇಹಕ್ಕೆ ಪೋಷಕಾಂಶಗಳು ದೊರೆಯುತ್ತವೆ. ಆದರೆ, ಸೌತೇಕಾಯಿಯನ್ನು ನೀರಿಗೆ ಹಾಕಿ ನೆನಸಿ ಈ ನೀರನ್ನು ಸೇವಿಸುವುದರಿಂದ ಇನ್ನೂ ಹೆಚ್ಚು ಲಾಭ ಸಿಗುತ್ತದೆ.
ತಜ್ಞರ ಪ್ರಕಾರ, ಈ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ರೋಗಗಳ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಈ ರೀತಿ ಸೌತೇಕಾಯಿಯನ್ನು ಸೇವಿಸುವುದರಿಂದ ಇದು ನಿಮ್ಮ ದೇಹವನ್ನು ಹೈಡ್ರೇಟ್ ಆಗಿ ಇರಿಸಲು ಸಹಾಯ ಮಾಡುತ್ತದೆ.
ಸೌತೆಕಾಯಿಯು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಇದು ಕಡಿಮೆ ಕ್ಯಾಲೊರಿಗಳನ್ನು ಒಳಗೊಂಡಿದೆ. ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸೌತೇಕಾಯಿ ಸಮೃದ್ಧವಾಗಿದೆ. ಈ ನೀರನ್ನು ಕುಡಿದರೆ ಸಾಕಷ್ಟು ವಿಟಮಿನ್ ಸಿ, ಕೆ, ಪೊಟ್ಯಾಸಿಯಮ್, ಮ್ಯಾಂಗನೀಸ್ ಅಂಶಗಳು ಸಿಗುತ್ತದೆ.
ಸೌತೆಕಾಯಿಯಲ್ಲಿ ಪೊಟ್ಯಾಸಿಯಮ್ ಅಂಶದಲ್ಲಿ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡಿ, ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
ಸೌತೆಕಾಯಿಯಲ್ಲಿರುವ ಫ್ಲೇವನಾಯ್ಡ್‌ಗಳು, ಟ್ಯಾನಿನ್‌ಗಳು, ಲಿಗ್ನಾನ್‌ಗಳಂತಹ ಉತ್ಕರ್ಷಣ ನಿರೋಧಕಗಳು ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ನಿವಾರಿಸುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ.
ಸೌತೇಕಾಯಿಯ ಸೇವನೆ ಉರಿಯೂತವನ್ನು ಕಡಿಮೆ ಮಾಡಿ, ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಸೌತೆಕಾಯಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ ಫೈಬರ್ ಮತ್ತು ನೀರು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಸೌತೇಕಾಯಿಯಲ್ಲಿರುವ ಆರ್ಧ್ರಕ ಗುಣಲಕ್ಷಣಗಳು ಚರ್ಮವನ್ನು ಒಳಗಿನಿಂದ ರಕ್ಷಿಸುತ್ತದೆ. ಇದು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಿ, ಮೈಬಣ್ಣವನ್ನು ಸುಧಾರಿಸುತ್ತದೆ.
ನಿರ್ಜಲೀಕರಣವು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಸೌತೆಕಾಯಿ ನೀರನ್ನು ಕುಡಿಯುವುದರಿಂದ ಅನೇಕ ಸಮಸ್ಯೆಗಳಿಂದ ಪಾರಾಗಬಹುದು. ಸೌತೆಕಾಯಿಯಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ನೀರು ಇರುತ್ತದೆ. ಈ ನೀರು ಜಲಸಂಚಯನವನ್ನು ಒದಗಿಸುತ್ತದೆ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ.
ಬೊಜ್ಜು ಹೋಗಲಾಡಿಸಲು ಹಾಗೂ ತೂಕ ಇಳಿಸಲು ಸೌತೆಕಾಯಿ ನೀರು ಕುಡಿಯುವುದು ತುಂಬಾ ಒಳ್ಳೆಯದು, ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಲಭಗೊಳಿಸುತ್ತದೆ. ಇವುಗಳಲ್ಲಿ ಕ್ಯಾಲೋರಿಗಳು ಕಡಿಮೆ, ಅದ್ದರಿಂದ ಇದು ಚಯಾಪಚಯವನ್ನು ಉತ್ತೇಜಿಸಿ ತೂಕವನ್ನು ಕಡಿಮೆ ಮಾಡಿ, ನಿಮ್ಮ ಕೊಬ್ಬು ಕರಗಲು ಸಹಾಯ ಮಾಡುತ್ತದೆ.