ಈ ತರಕಾರಿಯನ್ನು ಹಸಿಯಾಗಿ ತಿಂದರೆ ಸಾಕು.. ಗಂಟುಗಳಲ್ಲಿನ ಯೂರಿಕ್ ಆಸಿಡ್ ಕರಗಿ ಹೋಗಿ ಕೀಲು ನೋವು ಕಡಿಮೆಯಾಗುತ್ತೆ !
ನೈಸರ್ಗಿಕ ವಿಧಾನಗಳ ಮೂಲಕ ಯೂರಿಕ್ ಆಸಿಡ್ ನಿಯಂತ್ರಿಸುವುದು ಬಹಳ ಮುಖ್ಯ. ದಿನನಿತ್ಯ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಟೊಮೆಟೊದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಟೊಮೆಟೊ ಸೇವನೆಯು ನಮ್ಮ ದೇಹದಿಂದ ಯೂರಿಕ್ ಆಸಿಡ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ಟೊಮೆಟೊ ಸೇವನೆಯಿಂದ ಯೂರಿಕ್ ಆಸಿಡ್ ಸಮಸ್ಯೆಯನ್ನು ತಡೆಯಬಹುದು.
ಸೊಪ್ಪು ಸೇವನೆಯಿಂದ ಯೂರಿಕ್ ಆಸಿಡ್ ನಿಯಂತ್ರಿಸಬಹುದು. ಸೊಪ್ಪು ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನ ಸಿಗುತ್ತದೆ.
ಸೌತೆಕಾಯಿ ಸೇವಿಸುವುದರಿಂದ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.
ಅಧಿಕ ಪ್ರಮಾಣದ ವಿಟಮಿನ್ ಸಿ ಹೊಂದಿರುವ ಕ್ಯಾರೆಟ್ ಸೇವನೆಯಿಂದ ಯೂರಿಕ್ ಆಸಿಡ್ ನಿಯಂತ್ರಿಸಬಹುದು. ಪ್ರತಿದಿನ ಕ್ಯಾರೆಟ್ ಸೇವನೆಯು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.