ಸೌತೆಕಾಯಿಯನ್ನು ಈ ಸಮಯದಲ್ಲಿ ಹೀಗೆ ಸೇವಿಸಿದರೆ ಡೊಳ್ಳು ಹೊಟ್ಟೆ ಚಪ್ಪಟೆಯಾಗುವುದು ಖಂಡಿತಾ!ಸ್ಲಿಮ್ ಆಗಲು ಇದೇ ಸರಳ ಮಾರ್ಗ
ಹೊಟ್ಟೆಯ ಬೊಜ್ಜು ಮತ್ತು ದೇಹ ತೂಕವನ್ನು ಕಡಿಮೆ ಮಾಡಲು ಜಿಮ್, ವ್ಯಾಯಾಮ ಡಯೆಟ್ ಮಾಡಲೇ ಬೇಕು ಎಂದೇನಿಲ್ಲ.ಕೆಲವೊಂದು ಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಸೇವಿಸಿದರೆ ಸಾಕು.
ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಬಹಳ ಮುಖ್ಯ ಆಹಾರ ಪದಾರ್ಥ ಎಂದರೆ ಅದು ಸೌತೆಕಾಯಿ. ತೂಕವನ್ನು ಕಡಿಮೆ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಒಂದು ತಿಂಗಳ ಕಾಲ ತಪ್ಪದೆ ರಾತ್ರಿ ಸಮಯದಲ್ಲಿ ಸೌತೆಕಾಯಿ. ಹೀಗೆ ಮಾಡಿದರೆ ಸಣ್ಣಗಾಗುವುದರಲ್ಲಿ ಸಂದೇಹವೇ ಇಲ್ಲ.ಸೌತೆಕಾಯಿಯನ್ನು ರಾತ್ರಿ ಊಟವಾದ ಬಳಿಕ ತಿಂದರೆ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.
ಸೌತೆಕಾಯಿಯನ್ನು ಟೊಮೆಟೊ,ಈರುಳ್ಳಿ ಜೊತೆ ಉಪ್ಪು,ಕಾಳುಮೆಣಸು ಮತ್ತು ನಿಂಬೆ ರಸವನ್ನು ಬೆರೆಸಿ ಸೇವಿಸಿದರೆ ರುಚಿಕರವಾಗಿಯೂ ಇರುತ್ತದೆ,ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.
ಸೌತೆಕಾಯಿಯನ್ನು ಸಿಪ್ಪೆ ಸಮೇತ ತುರಿದುಕೊಂಡು ಮೊಸರಿನಲ್ಲಿ ಕಲಸಿ ಉಪ್ಪು, ಜೀರಿಗೆ ಪುಡಿ,ಕಾಳುಮೆಣಸಿನ ಪುಡಿ,ಕೊತ್ತಂಬರಿ ಪುಡಿ ಹಾಕಿ ಸೇವಿಸಿದರೆ ದೇಹವನ್ನು ತಂಪಾಗಿಸುತ್ತದೆ. ಜೊತೆಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಸೌತೆಕಾಯಿಯನ್ನು ಕತ್ತರಿಸಿ ಮತ್ತು ಬಾಳೆಹಣ್ಣು,ಪಾಲಕ್ ಮತ್ತು ಮೊಸರು ಜೊತೆಗೆ ಚೆನ್ನಾಗಿ ರುಬ್ಬಿಕೊಳ್ಳಿ. ಅಗತ್ಯ ಎನಿಸಿದರೆ ಸ್ವಲ್ಪ ತೆಂಗಿನಕಾಯಿಯನ್ನೂ ಸೇರಿಸಬಹುದು.ಈ ಸ್ಮೂಥಿ ಹೆಚ್ಚುವರಿ ಕೊಬ್ಬನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.
ಡಿಟಾಕ್ಸ್ ನೀರನ್ನು ತಯಾರಿಸಲು,ಸೌತೆಕಾಯಿಯನ್ನು ಕತ್ತರಿಸಿ ನೀರಿಗೆ ಹಾಕಿ ಅದರಲ್ಲಿ ಪುದೀನಾ,ನಿಂಬೆ ರಸ ಮತ್ತು ಶುಂಠಿ ಸೇರಿಸಿ ಕುದಿಸಿ ಕುಡಿಯಿರಿ. ಈ ನೀರು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.