Weight Loss: ನಿತ್ಯ ಜೀರಿಗೆ ನೀರು ಕುಡಿದರೆ ಎರಡೇ ವಾರದಲ್ಲಿ ಕರಗುತ್ತೆ ಹೊಟ್ಟೆಯ ಬೊಜ್ಜು

Wed, 08 May 2024-1:17 pm,

ಜೀರಿಗೆ ಆಹಾರ ರುಚಿ ಹೆಚ್ಚಿಸಬಲ್ಲ ಮಸಾಲೆಯಷ್ಟೇ ಅಲ್ಲ ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡಬಲ್ಲ ಅತ್ಯುತ್ತಮ ಮಸಾಲೆ ಪದಾರ್ಥ. ಇದರ ಪ್ರಯೋಜನಗಳೆಂದರೆ...   

ರಾತ್ರಿ ವೇಳೆ 1 ಚಮಚ ಜೀರಿಗೆಯನ್ನು ಒಂದು ಲೋಟ ಬಿಸಿನೀರಿನಲ್ಲಿ ಕುದಿಸಿಟ್ಟು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಈ ನೀರಿಗೆ ನೀರನ್ನು ಸೇವಿಸಿದರೆ ಕೇವಲ ಎರಡೇ ವಾರಗಳಲ್ಲಿ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ. 

ಜೀರಿಗೆ ನೀರಿನಲ್ಲಿ ಸಂಗ್ರಹವಾಗಿರುವ ವಿಟಮಿನ್ ಎ, ಸಿ, ತಾಮ್ರ ಮತ್ತು ಮ್ಯಾಂಗನೀಸ್ ನಮ್ಮ ದೇಹದಲ್ಲಿ ಕೊಬ್ಬಿನ ವಿಭಜನೆಯನ್ನು ಉತ್ತೇಜಿಸಿ, ಕರುಳಿನ ಸ್ನೇಹಿ ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಹಕಾರಿ ಆಗಿದೆ. 

ಜೀರಿಗೆಯು ಥೈಮಾಲ್ ಮತ್ತು ಸಾರಭೂತ ತೈಲಗಳನ್ನು ಹೊಂದಿರುತ್ತದೆ ಅದು ಲಾಲಾರಸ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ಇದು  ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಮಾತ್ರವಲ್ಲದೆ, ಆರೋಗ್ಯಕರ ತೂಕ ನಷ್ಟಕ್ಕೂ ಕೊಡುಗೆಯನ್ನು ನೀಡುತ್ತದೆ. 

ಆದರೆ, ತ್ವರಿತ ತೂಕ ಇಳಿಕೆಗೆ ಕೇವಲ ಜೀರಿಗೆ ನೀರಷ್ಟೇ ಸಾಕಾಗುವುದಿಲ್ಲ. ಇದರೊಂದಿಗೆ  ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಸೇವನೆಯೂ ಅಗತ್ಯ ಎಂಬುದನ್ನೂ ನೆನಪಿನಲ್ಲಿಡಿ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link