ಮೊಸರಿಗೆ ಈ ತರಕಾರಿ ರಸ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಬುಡದಿಂದಲೇ ಕಪ್ಪಾಗುವುದು!
ಬಿಳಿ ಕೂದಲು ಬಹುತೇಕರು ಎದುರಿಸುತ್ತಿರುವ ಸಮಸ್ಯೆ.ಬಿಳಿ ಕೂದಲು ಹುಟ್ಟಿಕೊಳ್ಳಲು ಕಾರಣ ಹಲವಿರಬಹುದು. ಆದರೆ ಸರಿಯಾದ ರೀತಿಯಲ್ಲಿ ಮನೆ ಮದ್ದು ಅನುಸರಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರವೂ ಸಿಗುತ್ತದೆ.
ಒಂದು ಕಪ್ ಮೊಸರು ಬಿಳಿ ಕೂದಲಿನ ಸಮಸ್ಯೆಯನ್ನು ಶಾಶ್ವತವಾಗಿ ದೂರ ಮಾಡುತ್ತದೆ. ಹೌದು, ಒಂದು ಕಪ್ ಮೊಸರಿಗೆ ಒಂದು ಟೊಮೇಟೊ ಹಣ್ಣನ್ನು ಬೆರೆಸಿ ಹಚ್ಚಿದರೆ ಬಿಳಿ ಕೂದಲಿನ ಸಮಸ್ಯೆಗೆ ಬೀಳುವುದು ಪೂರ್ಣ ವಿರಾಮ.
ಕೂದಲಿಗೆ ಮೊಸರು ಹಚ್ಚುವುದರಿಂದ ಕೂದಲು ಬೇರಿನಿಂದಲೇ ಬಲಗೊಳ್ಳಲು ಆರಂಭಿಸುತ್ತದೆ.ಅಲ್ಲದೆ,ನೈಸರ್ಗಿಕವಾಗಿ ಕಪ್ಪು ಬಣ್ಣಕ್ಕೆ ತಿರುಗಲು ಮೊಸರು ಸಹಾಯ ಮಾಡುತ್ತದೆ.
ಟೊಮೆಟೊ ಆಸಿಡ್ ಗುಣಗಳನ್ನು ಒಳಗೊಂಡಿದೆ. ಇದು ಕೂದಲಿನ PH ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ನೆತ್ತಿಯ ಮೇಲೆ ಹೆಚ್ಚುವರಿ ಎಣ್ಣೆ ಉತ್ಪಾದನೆಯನ್ನು ತಡೆದು,ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
ಮೊಸರು ಮತ್ತು ಟೊಮೇಟೊ ಹಣ್ಣನ್ನು ಒಂದು ಬೌಲ್‌ಗೆ ಹಾಕಿ ಮಿಶ್ರಣ ಮಾಡಿ.ಈಗ ಈ ಪೇಸ್ಟ್‌ಗೆ ನೀಲಗಿರಿ ಎಣ್ಣೆಯನ್ನು ಸೇರಿಸಿ ಕೂದಲಿಗೆ ಮಸಾಜ್ ಮಾಡಿ.ಬಿಳಿ ಕೂದಲು ಕಪಪು ಬಣ್ಣಕ್ಕೆ ತಿರುಗುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.