ಮೊಸರಿಗೆ ಇದನ್ನು ಬೆರೆಸಿ ಉಜ್ಜಿದರೆ.. ಹಲ್ಲಿನ ಹಳದಿ ಕಲೆ 10 ನಿಮಿಷದಲ್ಲಿ ಮಾಯವಾಗಿ, ಮುತ್ತಿನಂತೆ ಹೊಳೆಯುವುದು !
ಹಲ್ಲುಗಳ ಹಳದಿ ಕಲೆಯನ್ನು ತೆಗೆದುಹಾಕಲು ಜನರು ಅನೇಕ ಮನೆಮದ್ದುಗಳನ್ನು ಅನುಸರಿಸುತ್ತಾರೆ. ಹಲ್ಲಿನ ಹಳದಿ ಕಲೆ ತೊಲಗಿಸಲು ಮೊಸರು ಪರಿಣಾಮಕಾರಿಯಾಗಿದೆ.
ಮೊಸರು ಹಲ್ಲುಗಳನ್ನು ಬಿಳಿಯಾಗಿಸಲು ಸಹಾಯ ಮಾಡುವುದಲ್ಲದೆ, ಒಸಡಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಮೊಸರು ಬಳಸಿ ಹಲ್ಲುಗಳ ಹಳದಿ ಕಲೆಗಳನ್ನು ಸ್ವಚ್ಛಗೊಳಿಸಬಹುದು.
ಮೊಸರು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಹಲ್ಲು ಕೊಳೆತವನ್ನು ತಡೆಯಲು ಮತ್ತು ಒಸಡುಗಳ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೊಸರಿನಲ್ಲಿರುವ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಪ್ರೋಬಯಾಟಿಕ್‌ಗಳು ಹಲ್ಲುಗಳನ್ನು ಬಿಳಿಯಾಗಿಸಲು ಸಹಾಯ ಮಾಡುತ್ತದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಒಂದು ಚಮಚ ಅರಿಶಿನ ಪುಡಿಯನ್ನು ತೆಗೆದುಕೊಂಡು ಅದಕ್ಕೆ 2 ಚಮಚ ತಾಜಾ ಮೊಸರು ಸೇರಿಸಿ. ಈ ಎರಡು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪೇಸ್ಟ್ ಮಾಡಿ.
ಈ ಪೇಸ್ಟ್ ಅನ್ನು ಟೂತ್ ಬ್ರಷ್ ಮೇಲೆ ಹಚ್ಚಿ 2-3 ನಿಮಿಷಗಳ ಕಾಲ ಬ್ರಷ್ ಮಾಡಿ. ಇದರ ನಂತರ, ನಿಮ್ಮ ಬಾಯಿಯನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ಈ ಪ್ರಕ್ರಿಯೆಯನ್ನು ವಾರಕ್ಕೆ 2 ರಿಂದ 3 ಬಾರಿ ಮಾಡಬೇಕು.
ಸೂಚನೆ : ಈ ಮಾಹಿತಿಯು ಮನೆಮದ್ದುಗಳನ್ನು ಆಧರಿಸಿದ್ದು, ಜೀ ಕನ್ನಡ ನ್ಯೂಸ್ ಹೊಣೆಯಲ್ಲ. ವೈದ್ಯರನ್ನು ಸಂಪರ್ಕಿಸಿ ನಂತರವೇ ಇದನ್ನು ಅನುಸರಿಸಿ.