ಹೇರ್ ಡೈ ಬೇಡವೇ ಬೇಡ! ಮೊಸರನ್ನು ಹೀಗೆ ಬಳಸಿದ್ರೆ ನೀಳವಾದ ಗಾಢ ಕಪ್ಪು ಕೂದಲು ನಿಮ್ಮದಾಗುತ್ತೆ!
![ಬಿಳಿ ಕೂದಲಿಗೆ ಮೊಸರು Curd For White Hair](https://kannada.cdn.zeenews.com/kannada/sites/default/files/2024/11/15/466324-curd-to-darken-white-hair.jpg?im=FitAndFill=(500,286))
ಬಿಳಿ ಕೂದಲಿಗೆ ಮೊಸರಿಗಿಂತ ಅತ್ಯುತ್ತಮವಾದ ಮನೆಮದ್ದು ಮತ್ತೊಂದಿಲ್ಲ.
![ಕೂದಲಿಗೆ ಮೊಸರು Curd For Hair](https://kannada.cdn.zeenews.com/kannada/sites/default/files/2024/11/15/466323-curd-to-darken-white-hair-1.jpg?im=FitAndFill=(500,286))
ಮೊಸರಿನಲ್ಲಿರುವ ಪೋಷಕಾಂಶಗಳು ಕೂದಲನ್ನು ಹೈಡ್ರೇಟ್ ಮಾಡಿ, ನೆತ್ತಿಯಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರಗಳ ಸೋಂಕನ್ನು ಕಡಿಮೆ ಮಾಡುತ್ತದೆ.
![ಬಿಳಿ ಕೂದಲನ್ನು ಕಪ್ಪಾಗಿಸಲು ಮೊಸರು Curd to darken white hair](https://kannada.cdn.zeenews.com/kannada/sites/default/files/2024/11/15/466322-curd-to-darken-white-hair-2.jpg?im=FitAndFill=(500,286))
ಅಷ್ಟೇ ಅಲ್ಲ, ಮೊಸರು ಅತ್ಯುತ್ತಮವಾದ ಕಾಳಜನ್ ಮತ್ತು ಮೆಲನಿನ್ ಬೂಸ್ಟರ್ ಆಗಿದ್ದು ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುವುದರ ಜೊತೆಗೆ ಕಾಂತಿಯನ್ನು ನೀಡುತ್ತದೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಮೊಸರಿನ ಹೇರ್ ಪ್ಯಾಕ್ ಪ್ರಯೋಜನಕಾರಿ. ಇದಕ್ಕಾಗಿ, ಒಂದು ಕಪ್ ಮೊಸರಿನಲ್ಲಿ ಒಂದು ಚಮಚ ಕಾಫಿ ಪುಡಿ ಹಾಕಿ, ಒಂದೆರಡು ಹನಿ ನಿಂಬೆ ಹನಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ.
ಮೊಸರಿನ ಹೇರ್ ಪ್ಯಾಕ್ ಅನ್ವಯಿಸಿ 45 ನಿಮಿಷಗಳ ಬಳಿಕ ಸಾದಾ ನೀರಿನಿಂದ ತಲೆ ತೊಳೆಯುವುದರಿಂದ ಬಿಳಿ ಕೂದಲು ಗಾಢ ಕಪ್ಪಾಗುತ್ತದೆ. ನಿಯಮಿತವಾಗಿ ಇದರ ಬಳಕೆಯಿಂದ ಕೂದಲು ಉದ್ದವಾಗಿಯೂ ಬೆಳೆಯುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.