ಮೊಸರಿನಲ್ಲಿ ಈ 2 ಪದಾರ್ಥಗಳನ್ನು ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತೆ...
)
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ದೊರೆಯುವ ಕೆಮಿಕಲ್ ಹೇರ್ ಡೈ ಬದಲಿಗೆ ಮನೆಯಲ್ಲೇ ಮೊಸರನ್ನು ಬಳಸಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
)
ಬಿಳಿ ಕೂದಲಿನೊಂದಿಗೆ ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವ ಕೊಬ್ಬರಿ ಎಣ್ಣೆ ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ ಮೊಸರಿನ ಹೇರ್ ಪ್ಯಾಕ್ ತಯಾರಿಸಿ ಹಚ್ಚುವುದರಿಂದ ಕೂದಲು ಬುಡದಿಂದಲೂ ಶಾಶ್ವತವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
)
ಕೊಬ್ಬರಿ ಎಣ್ಣೆ ಕೂದಲಿನ ಸರ್ವ ಸಮಸ್ಯೆಗೆ ಪರಿಹಾರ, ಮೊಸರು ಉತ್ತಮ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಕರಿಬೇವಿನ ಎಲೆಗಳು ಕೂದಲನ್ನು ಬುಡದಿಂದ ಕಪ್ಪಾಗಿಸಿ ಕೂದಲ ಬೆಳವಣಿಗೆಗೆ ಸಹಕಾರಿ ಆಗುತ್ತದೆ.
ಮೊದಲಿಗೆ ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಚೆನ್ನಾಗಿ ತೊಳೆದು ಒಣಗಿಸಿ ಪುಡಿ ಮಾಡಿಕೊಳ್ಳಿ. ಕರಿಬೇವಿನ ಸೊಪ್ಪಿನ ಪುಡಿಯಲ್ಲಿ ಒಂದು ಸ್ಪೂನ್ ಕೊಬ್ಬರಿ ಎಣ್ಣೆ ಹಾಕಿ ಮಿಕ್ಸ್ ಮಾಡಿ. ಬಳಿಕ ಇದಕ್ಕೆ 2 ಸ್ಪೂನ್ ಮೊಸರನ್ನು ಹಾಕಿ ಚೆನ್ನಾಗಿ ಬೆರೆಸಿ.
ಈ ರೀತಿ ತಯಾರಿಸಿದ ಮೊಸರಿನ ಹೇರ್ ಪ್ಯಾಕ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಒಂದೆರಡು ಗಂಟೆಗಳ ಬಳಿಕ ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ.
ಬಿಳಿ ಕೂದಲಿಗೆ ಈ ರೀತಿ ಮೊಸರಿನ ಹೇರ್ ಪ್ಯಾಕ್ ಅನ್ನು ವಾರದಲ್ಲಿ ಒಂದೆರಡು ಬಾರಿ ಬಳಸುತ್ತಾ ಬಂದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ. ಮಾತ್ರವಲ್ಲ ಕೂದಲು ದಪ್ಪಗೆ ಉದ್ದವಾಗಿ ಬೆಳೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.