ನೈಸರ್ಗಿಕವಾಗಿ ಬಿಳಿ ಕೂದಲಿನಿಂದ ಶಾಶ್ವತ ಪರಿಹಾರ ಬೇಕೆ! `ಮೊಸರಿನ ಹೇರ್ ಪ್ಯಾಕ್` ಟ್ರೈ ಮಾಡಿ!
ಬಿಳಿ ಕೂದಲಿನಿಂದ ಪರಿಹಾರ ಪಡೆಯಲು ಮನಸ್ಸನ್ನು ನಿರಾಳವಾಗಿರಿಸಿಕೊಳ್ಳುವುದರ ಜೊತೆಗೆ ಸರಿಯಾದ ಆಹಾರ, ನಿದ್ದೆ ಎಲ್ಲವೂ ಅತ್ಯಗತ್ಯ.
ಈಗಾಗಲೇ ಬೂದು ಬಣ್ಣಕ್ಕೆ ತಿರುಗಿರುವ ಕೂದಲನ್ನು ಮತ್ತೆ ನೈಸರ್ಗಿಕವಾಗಿ ಕಪ್ಪಾಗಾಗಿಸಲು ಪ್ರತಿಯೊಬ್ಬರ ಮನೆಯಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಮೊಸರು ತುಂಬಾ ಪ್ರಯೋಜನಕಾರಿ ಆಗಿದೆ.
ಪ್ರೊಟೀನ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಮೃದ್ಧವಾದ ಮೊಸರು ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುವುದರ ಜೊತೆಗೆ ಕೂದಲನ್ನು ಮೃದುವಾಗಿಸಿ, ಕಾಂತಿಯುತವಾಗಿಸುತ್ತದೆ.
ಒಂದು ಕಪ್ ಮೊಸರಿಗೆ ಒಂದು ಟೊಮಾಟೊ ಮ್ಯಾಶ್ ಮಾಡಿ ಮಿಶ್ರಣ ಮಾಡಿ, ಸ್ವಲ್ಪವೇ ಸ್ವಲ್ಪ ನೀಲಗಿರಿ ಎಣ್ಣೆಯನ್ನು ಬೆರೆಸಿ ಹೇರ್ ಪ್ಯಾಕ್ ಆಗಿ ಬಳಸಿ.
ಈ ರೀತಿ ಮೊಸರಿನ ಹೇರ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸುವುದರಿಂದ ಕೆಲವೇ ವಾರಗಳಲ್ಲಿ ನಿಮ್ಮ ಬಿಳಿ ಕೂದಲು ಗಾಢ ಕಪ್ಪಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.