ಮುಂಜಾನೆ ಎದ್ದಂತೆ ಮೊಸರಿಗೆ ಈ ಕಪ್ಪು ಬೀಜ ಬೆರೆಸಿ ತಿನ್ನಿ: ದಿನಪೂರ್ತಿ ನಾರ್ಮಲ್ ಇರುತ್ತೆ ಬ್ಲಡ್ ಶುಗರ್! ಯಾವ ಔಷಧಿಯೂ ಬೇಕಿಲ್ಲ
ಮೊಸರಿನಲ್ಲಿ ಪ್ರೋಟೀನ್ 3.5 ಗ್ರಾಂ, ಕಾರ್ಬೋಹೈಡ್ರೇಟ್ 4.7 ಗ್ರಾಂ, ಸಕ್ಕರೆ 4.7 ಗ್ರಾಂ, ಫೈಬರ್ 0 ಗ್ರಾಂ, ಇದಲ್ಲದೆ, ವಿಟಮಿನ್ ಬಿ 12, ಕ್ಯಾಲ್ಸಿಯಂ, ರಂಜಕ ಮತ್ತು ರೈಬೋಫ್ಲಾವಿನ್ ಕೂಡ ಸಮೃದ್ಧವಾಗಿದೆ.
ಡಾ. ಪಾಖಿ ಶರ್ಮಾ ಪ್ರಕಾರ, ಮೊಸರು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಹೊಂದಿದ್ದು, ಇದು ಮಧುಮೇಹ ಇರುವವರಿಗೆ ಒಳ್ಳೆಯದು. ಉತ್ತಮ ಪ್ರಮಾಣದ ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಡಿ ಹೊಂದಿರುವ ಆರೋಗ್ಯಕರ ಆಹಾರ.
ಮೊಸರಿನಲ್ಲಿ ಕಾರ್ಬೋಹೈಡ್ರೇಟ್’ಗಳು ಕಡಿಮೆ ಮತ್ತು ಹೆಚ್ಚಿನ ಪ್ರೋಟೀನ್’ಗಳಿವೆ. ಆದ್ದರಿಂದ, ಸಕ್ಕರೆ ಕಾಯಿಲೆ ಇರುವವರಿಗೆ ಇದು ಉತ್ತಮ ಉಪಹಾರವಾಗಿದ್ದು, ದಿನದಲ್ಲಿ ಇದನ್ನು ಒಂದು ಬಾರಿ ಸೇವಿಸಿದರೆ ಬ್ಲಡ್ ಶುಗರ್ ನಿಯಂತ್ರಣದಲ್ಲಿರುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕೆ ಮೊಸರು ಹೆಸರುವಾಸಿ. ಕ್ಯಾಲ್ಸಿಯಂ ಮತ್ತು ರಂಜಕದಲ್ಲಿ ಸಮೃದ್ಧವಾಗಿರುವ ಇದು, ಮೂಳೆಗಳು ಮತ್ತು ಹಲ್ಲುಗಳಿಗೆ ಒಳ್ಳೆಯದು.
ಟೈಪ್ 2 ಡಯಾಬಿಟಿಸ್ ಇರುವವರಿಗೆ ಪ್ರೋಬಯಾಟಿಕ್ ಮೊಸರು ವಿಶೇಷವಾಗಿ ಸಹಾಯಕವಾಗಬಹುದು. ಆದರೆ ರಾತ್ರಿ ವೇಳೆ ಮೊಸರು ತಿನ್ನುವುದು ಒಳ್ಳೆಯದಲ್ಲ, ಏಕೆಂದರೆ ಇದು ಲೋಳೆಯ ಬೆಳವಣಿಗೆಗೆ ಕಾರಣವಾಗಬಹುದು.
ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನುವುದರಿಂದ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿಯಾಗುತ್ತದೆ, ಆದ್ದರಿಂದ, ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿಯಲ್ಲಿ ಮೊಸರು ತಿನ್ನುವುದು ಬೇಡ. ಮೊಸರು ತಿನ್ನಲು ಸೂಕ್ತ ಸಮಯವೆಂದರೆ ಹಗಲು.
ಇನ್ನು ಮೊಸರಿಗೆ ಕಪ್ಪು ಎಳ್ಳು ಬೆರೆಸಿ ತಿಂದರೆ ಬಹಳಷ್ಟು ಪ್ರಯೋಜನ ಸಿಗುತ್ತದೆ. ಬೆಳಗ್ಗೆ ಒಂದು ಕಪ್ ಮೊಸರಿಗೆ ಚಿಟಿಕೆ ಪ್ರಮಾಣದಲ್ಲಿ ಕಪ್ಪು ಎಳ್ಳು ಬೆರೆಸಿ ತಿಂದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.