ಈ ಸೊಪ್ಪು ಸೇರಿಸಿ ದಿನಕ್ಕೆ ಎರಡು ಕಪ್ ಮೊಸರು ತಿನ್ನಿ!ಮಾತ್ರೆ ಮರೆತರೂ ತಿಂಗಳವರೆಗೂ ನಾರ್ಮಲ್ ಆಗಿಯೇ ಇರುವುದು ಬ್ಲಡ್ ಶುಗರ್ !
ಮಾಮೂಲಿಯಂತೆ ಕಾಣುವ ಮಧುಮೇಹ ಯಾವಾಗ ಪ್ರಾಣಕ್ಕೆ ಕುತ್ತು ತರುತ್ತದೆ ಎಂದು ಹೇಳುವುದು ಸಾಧ್ಯವೇ ಆಗುವುದಿಲ್ಲ.ಈ ಕಾಯಿಲೆಯಲ್ಲಿ ರೋಗಿಗಳು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವ ಆಹಾರವನ್ನು ಆಯ್ಕೆ ಮಾಡಬೇಕು.
ಡಯಾಬಿಟಿಸ್ ಇದ್ದವರಿಗೆ ಮೊಸರು ಸೇವನೆ ಬಹಳ ಪ್ರಯೋಜನಕಾರಿಯಾಗಿದೆ. ಮಧುಮೇಹಿಗಳು ದಿನಕ್ಕೆ ಕನಿಷ್ಠ ಎರಡು ಕಪ್ಪಾದರೂ ಮೊಸರು ತಿನ್ನಬೇಕು.
ಹೀಗೆ ಮೊಸರು ಸೇವಿಸುವಾಗ ಅದಕ್ಕೆ ಮೆಂತ್ಯೆ ಸೊಪ್ಪು ಬೆರೆಸಬೇಕು.ಮೆಂತ್ಯೆ ಸೊಪ್ಪು ಬೆರೆಸಿದ ಮೊಸರನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಯೇ ಇರುತ್ತದೆ.
ಮೆಂತ್ಯೆ ಸೊಪ್ಪು ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವ ಪ್ರಕ್ರಿಯೆನ್ನು ನಿಧಾನಗೊಳಿಸುತ್ತದೆ. ಈ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೆಂತ್ಯೆ ಸೊಪ್ಪು ಬದಲಿಗೆ ಮೊಸರಿಗೆ ಮೆಂತ್ಯೆ ಬೀಜಗಳನ್ನು ಪುಡಿ ಮಾಡಿಯೂ ಹಾಕಬಹುದು. ಇದನ್ನು ಸೇವಿಸುವ ಮೂಲಕವೂ ಬ್ಲಡ್ ಶುಗರ್ ಅನ್ನು ಕಂಟ್ರೋಲ್ ಮಾಡಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.