ಈ ಎಲೆಯ ಪುಡಿ ತೆಂಗಿನ ಎಣ್ಣೆ ಬೆರೆಸಿ ಬಿಳಿ ಕೂದಲಿಗೆ ಹಚ್ಚಿ.. 4 ವಾರಗಳಲ್ಲಿ ಗಾಢ ಕಪ್ಪಾಗಿ, ಉದ್ದ ದಪ್ಪವಾದ ಕೂದಲು ಮಾರುದ್ದ ಬೆಳೆಯುವುದು.!
ಬಿಳಿ ಕೂದಲನ್ನು ಕಪ್ಪಾಗಿಸಲು ಅನೇಕರು ಹೇರ್ ಡೈ ಬಳಸುತ್ತಾರೆ. ಆದರೆ ಕೂದಲಿನ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಕೂದಲು ಉದುರುವಿಕೆಗೆ ಕಾರಣವಾಗಬಹುದು.
ಕೂದಲು ಕಪ್ಪಾಗುವಲ್ಲಿ ಮೆಲನಿನ್ ಪ್ರಮುಖವಾಗಿದೆ. ಮೆಲನಿನ್ ಮಟ್ಟವನ್ನು ಹೆಚ್ಚಿಸುವ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
ತೆಂಗಿನೆಣ್ಣೆ ಕೂದಲಿನ ಆರೋಗ್ಯಕ್ಕೆ ಸಾಕಷ್ಟು ಪರಿಣಾಮಕಾರಿಯಾಗಿದೆ. ಇದು ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಕೂದಲಿಗೆ ಪೋಷಣೆ ನೀಡುತ್ತದೆ. ಈ ತೆಂಗಿನ ಎಣ್ಣೆಗೆ ಕರಿಬೇವಿನ ಎಲೆಯ ಪುಡಿ ಸೇರಿಸಿ ಬಳಸಿದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುವುದು.
ಕರಿಬೇವಿನ ಎಲೆಯನ್ನು ಚೆನ್ನಾಗಿ ತೊಳೆದು ಬಿಸಿಲಲ್ಲಿ ಒಣಗಿಸಿ, ಪುಡಿ ಮಾಡಿ. ತೆಂಗಿನೆಣ್ಣೆಯನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ, ಇದಕ್ಕೆ ಎರಡು ಚಮಚ ಕರಿಬೇವಿನ ಎಲೆ ಪುಡಿ, 2 ಚಮಚ ಆಮ್ಲಾ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ.
ಈ ಎಣ್ಣೆಯನ್ನು ಶೋಧಿಸಿ, ಗಾಜಿನ ಬಾಟಲಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಿ. ವಾರಕ್ಕೆ ಎರಡರಿಂದ ಮೂರು ಬಾರಿ ಕೂದಲಿಗೆ ಈ ಎಣ್ಣೆ ಹಚ್ಚಿದರೆ ಬಿಳಿ ಕೂದಲು ಬುಡದಿಂದ ಶಾಶ್ವತವಾಗಿ ಕಪ್ಪಾಗುವುದು. ಅಲ್ಲದೇ ಉದ್ದ ದಪ್ಪ ಕೂದಲು ಬೆಳೆಯುವುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ತಜ್ಞರು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.