ಕೂದಲುದುರುವುದನ್ನು ತಡೆದು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಕರಿಬೇವಿನ ಸೊಪ್ಪು, ಕೊಬ್ಬರಿ ಎಣ್ಣೆಯೇ ಸಾಕು!
ಒತ್ತಡ ಭರಿತ ಜೀವನಶೈಲಿಯಿಂದಾಗಿ ಅಕಾಲಿಕ ಬಿಳಿ ಕೂದಲು ಹಾಗೂ ಕೂದಲುದುರುವಿಕೆ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ.
ಆದರೆ, ನೀವು ಕರಿಬೇವಿನ ಸೊಪ್ಪು ಹಾಗೂ ತೆಂಗಿನೆಣ್ಣೆಯನ್ನು ಸರಿಯಾದ ವಿಧಾನದಲ್ಲಿ ಬಳಸುವ ಮೂಲಕ ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುವುದರ ಜೊತೆಗೆ ಕೂದಲುದುರುವಿಕೆ ಸಮಸ್ಯೆಯನ್ನು ಸಹ ನಿವಾರಿಸಬಹುದು. ಇದಕ್ಕಾಗಿ ಕರಿಬೇವಿನ ಎಣ್ಣೆ ಅತ್ಯುತ್ತಮ ಪರಿಹಾರವಾಗಿದೆ.
ಕರಿಬೇವಿನ ಎಲೆಗಳು ಉತ್ಕರ್ಷಣ ನೀರಿಧಕಗಳಲ್ಲಿ ಹೇರಳವಾಗಿದ್ದು ಬುಡದಿಂದಲೂ ಕೂದಲನ್ನು ಗಟ್ಟಿಯಾಗಿಸುತ್ತದೆ. ಜೊತೆಗೆ ಇದರಲ್ಲಿರುವ ಬೀಟಾ ಕ್ಯಾರೊಟಿನ್ ಹಾಗೂ ಪ್ರೊಟೀನ್ ಕೂದಲು ಕಡು ಕಪ್ಪಾಗಲು ಸಹಕಾರಿ ಆಗಿದೆ.
ತೆಂಗಿನೆಣ್ಣೆಯೂ ಕೂದಲಿನಲ್ಲಿ ಪ್ರೊಟೀನ್ ನಷ್ಟವಾಗುವುದನ್ನು ತಡೆಯುತ್ತದೆ. ಜೊತೆಗೆಇದು ನೆತ್ತಿಯನ್ನು ಪೋಷಿಸಿ ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ.
ಒಂದು ಕಪ್ ತೆಂಗಿನೆಣ್ಣೆಯಲ್ಲಿ ಒಂದು ಹಿಡಿ ತಾಜಾ ಕರಿಬೇವಿನ ಎಲೆಯಿಂದ ಸುಲಭವಾಗಿ ಕರಿಬೇವಿನ ಎಣ್ಣೆಯನ್ನು ತಯಾರಿಸಬಹುದು.
ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಅದನ್ನು ಬಿಸಿಮಾಡಿ. ಬಳಿಕ ಒಂದು ಬಟ್ಟಲಿನಲ್ಲಿ ತೆಂಗಿನೆಣ್ಣೆ ಹಾಕಿ ಆ ನೀರಿನ ಕಾವಿನಲ್ಲಿ ಇರಿಸಿ. ಡಬಲ್ ಬಾಯ್ಲರ್ ನಿಂದಾಗಿ ಎಣ್ಣೆ ನಿಧಾನವಾಗಿ ಬಿಸಿಯಾಗುತ್ತದೆ.
ಬಟ್ಟಲಿನಲ್ಲಿರುವ ತೆಂಗಿನೆಣ್ಣೆ ಬೆಚ್ಚಗಾದ ಬಳಿಕ ಅದರಲ್ಲಿ ತಾಜಾ ಕರಿಬೇವಿನ ಎಲೆಗಳನ್ನು ಮಿಶ್ರಣ ಮಾಡಿ. ಸಣ್ಣ ಸಣ್ಣ ಗುಳ್ಳೆ ಬರುವವರೆಗೂ ಈ ಮಿಶ್ರಣ ಬಿಸಿಯಾಗಿಸಿ. ಇದು ಬಹುತೇಕ ಕಪ್ಪುಬಣ್ಣಕ್ಕೆ ತಿರುಗುವವರೆಗೂ ಬಿಸಿಯಾಗಲು ಬಿಡಿ.
ಎಣ್ಣೆ ತಣ್ಣಗಾದ ಬಳಿಕ ತೆಂಗಿನೆಣ್ಣೆಯಿಂದ ಕರಿಬೇವಿನ ಎಲೆಗಳನ್ನು ಬೇರ್ಪಡಿಸಿ, ಈ ಎಣ್ಣೆಯನ್ನು ಗಾಜಿನ ಸೀಸದಲ್ಲಿ ಶೇಖರಿಸಿಡಿ.
ಈ ರೀತಿ ಸಂಗ್ರಹಿಸಿಟ್ಟ ಎಣ್ಣೆಯನ್ನು ವಾರದಲ್ಲಿ ಒಂದೆರಡು ಬಾರಿ ನಿಯಮಿತವಾಗಿ ಬಳಸುತ್ತಾ ಬಂದರೆ ಬಿಳಿ ಕೂದಲು ಕಪ್ಪಾಗಿ, ಕೂದಲು ಬುಡದಿಂದಲೂ ಗಟ್ಟಿಯಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.