ತೆಂಗೆನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಕಪ್ಪಾಗುವುದಲ್ಲದೇ, ಮರಳಿ ಬರೋದಿಲ್ಲ.!
ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಹೇರ್ ಡೈ ಮೊರೆ ಹೋಗುವುದೇ ಹೆಚ್ಚು. ಆದರೆ ಇದು ಕೂದಲಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ಎಷ್ಟೇ ದುಬಾರಿ ಹೇರ್ ಡೈ ತಂದು ಹಚ್ಚಿದರೂ ಬಿಳಿ ಕೂದಲು ಮರಳಿ ಕಾಣಿಸುತ್ತವೆ. ಕೂದಲು ಕಪ್ಪಾಗುವಲ್ಲಿ ಮೆಲನಿನ್ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಮೆಲನಿನ್ ಮಟ್ಟವನ್ನು ಹೆಚ್ಚಿಸುವ ತೈಲಗಳನ್ನು ಬಳಸುವುದರಿಂದ ಬಿಳಿ ಕೂದಲನ್ನು ಸುಲಭವಾಗಿ ಹೋಗಲಾಡಿಸಬಹುದು.
ಕರಿಬೇವಿನ ಎಲೆ ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ತೆಂಗಿನೆಣ್ಣೆ ಸಹ ಕೂದಲಿನ ಆರೋಗ್ಯಕ್ಕೆ ತುಂಬಾ ಉಪಕಾರಿ. ಈ ಎರಡನ್ನು ಬಳಸುವುದರಿಂದ ಕೂದಲು ಕಪ್ಪಾಗುವುದು.
ಕರಿಬೇವಿನ ಎಲೆಯನ್ನು ಸ್ವಚ್ಛವಾದ ನೀರಿನಲ್ಲಿ ತೊಳೆದು ಬಿಸಿಲಲ್ಲಿ ಒಣಗಿಸಿ, ಪುಡಿ ಮಾಡಿಟ್ಟುಕೊಳ್ಳಿ.
ತೆಂಗಿನೆಣ್ಣೆಯನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ. ಅದಕ್ಕೆ ಎರಡು ಚಮಚ ಕರಿಬೇವಿನ ಎಲೆ ಪುಡಿ, 2 ಚಮಚ ಆಮ್ಲಾ ಪುಡಿಯನ್ನು ಹಾಕಿ, ಕುದಿಸಿ.
ಕುದಿಸಿದ ಎಣ್ಣೆಯನ್ನು ಗಾಜಿನ ಬಾಟಲಿಗಳಲ್ಲಿ ಶೋಧಿಸಿ ಇಟ್ಟುಕೊಳ್ಳಿ. ವಾರಕ್ಕೆ ಎರಡರಿಂದ ಮೂರು ಬಾರಿ ಕೂದಲಿಗೆ ಈ ಎಣ್ಣೆ ಹಚ್ಚಿದರೆ ಬಿಳಿ ಕೂದಲು ಬುಡದಿಂದ ಶಾಶ್ವತವಾಗಿ ಕಪ್ಪಾಗುವುದು.