ಕರಿಬೇವಿನ ಎಲೆಯನ್ನು ಈ ರೀತಿ ಬಳಸಿದ್ರೆ ಬಿಳಿ ಕೂದಲು ಗಾಢ ಕಪ್ಪಾಗೋದು ಗ್ಯಾರಂಟಿ..!
ಬಿಳಿ ಕೂದಲನ್ನು ನೈಸರ್ಗಿಕವಾಗಿ ಗಾಢ ಕಪ್ಪು ಬಣ್ಣಕ್ಕೆ ತಿರುಗಿಸಲು ಕರಿಬೇವಿನ ಎಲೆಗಳು ತುಂಬಾ ಲಾಭದಾಯಕವಾಗಿದೆ.
ಕರಿಬೇವಿನ ಎಲೆಗಳಲ್ಲಿ ಬೀಟಾ-ಕ್ಯಾರೋಟಿನ್, ಪ್ರೊಟೀನ್ ಹೇರಳವಾಗಿದ್ದು ಇದು ಕೂದಲು ಉದುರುವುದನ್ನು ತಡೆಯುವುದಷ್ಟೇ ಅಲ್ಲ ಕೂದಲಿನ ಕಿರುಚೀಲಗಳನ್ನು ಬಲಪಡಿಸಿ ಕೂದಲು ಬೆಳೆಯಲು, ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡಲು ಕೂಡ ಪ್ರಯೋಜನಕಾರಿ ಆಗಿದೆ.
ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಕೊಬ್ಬರಿ ಎಣ್ಣೆ ಕೂದಲಿನ ಸರ್ವ ಸಮಸ್ಯೆಗೂ ರಾಮಬಾಣವಿದ್ದಂತೆ.
ಒಂದು ಹಿಡಿ ಕರಿಬೇವಿನ ಎಲೆಗಳನ್ನು ಚೆನ್ನಾಗಿ ರುಬ್ಬಿ, ಇದರಲ್ಲಿ ಒಂದೆರಡು ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಹಾಕಿ ಕಡಿಮೆ ಉರಿಯಲ್ಲಿ ಒಲೆಯ ಮೇಲಿಟ್ಟು ಐದು ನಿಮಿಷ ಕಾಯಿಸಿ.
ಕಾಯಿಸಿಟ್ಟ ಎಣ್ಣೆ ತಣ್ಣಗಾದ ಬಳಿಕ ನಿಧಾನವಾಗಿ ಕೂದಲಿನ ಬುಡದಿಂದ ತುದಿಯವರೆಗೂ ಎಣ್ಣೆಯನ್ನು ಹಚ್ಚಿ ಲಘುವಾಗಿ ಮಸಾಜ್ ಮಾಡಿ. ಅರ್ಧಗಂಟೆ ಹಾಗೆ ಬಿಟ್ಟು ಹೇರ್ ವಾಶ್ ಮಾಡಿದರೆ, ಸುಂದರ ಕಡು ಕಪ್ಪಾದ ಕೂದಲನ್ನು ನಿಮ್ಮದಾಗಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.