ಕರಿಬೇವಿನ ನೀರಿಗೆ ಈ ಹಣ್ಣಿನ ರಸ ಬೆರೆಸಿ ಕುಡಿದರೆ.. ಒಂದು ತಿಂಗಳಲ್ಲಿ ಬೊಜ್ಜು ಕರಗಿ ಶಿಲ್ಪಾ ಶೆಟ್ಟಿಯಂತೆ ಫ್ಲಾಟ್ ಟಮ್ಮಿ ಪಡೆಯುವಿರಿ!
ಪ್ರತಿದಿನ ಕರಿಬೇವಿನ ನೀರು ಕುಡಿದರೆ ಬೊಜ್ಜು ಬರುವುದಿಲ್ಲ. ಕರಿಬೇವಿನ ಸೊಪ್ಪು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಬಹುಬೇಗ ಕರಗಿಸುತ್ತದೆ. ಕರಿಬೇವಿನ ಎಲೆಗಳು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ಹೊಟ್ಟೆಯ ಆರೋಗ್ಯವನ್ನು ಸುಧಾರಿಸುತ್ತದೆ.
ಕರಿಬೇವಿನ ನೀರಿನಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್‌ಗಳು ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತವೆ. ಕರಿಬೇವಿನ ನೀರು ಚರ್ಮವನ್ನು ತುಂಬಾ ಆರೋಗ್ಯಕರವಾಗಿಸುತ್ತದೆ. ಚರ್ಮದ ಸಮಸ್ಯೆಗಳು ದೂರವಾಗುತ್ತವೆ.
ಕರಿಬೇವಿನ ನೀರು ಕುಡಿಯುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಪ್ರತಿದಿನ ಕರಿಬೇವಿನ ನೀರನ್ನು ಕುಡಿಯುವುದರಿಂದ ಕೂದಲು ಉದ್ದ ಮತ್ತು ದಪ್ಪವಾಗಿ ಬೆಳೆಯುತ್ತದೆ.
ಪ್ರತಿದಿನ ಬೆಳಿಗ್ಗೆ ಕರಿಬೇವಿನ ನೀರನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದು. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನೂ ನಿಯಂತ್ರಿಸಬಹುದು.
ಕರಿಬೇವಿನ ನೀರನ್ನು ತಯಾರಿಸಲು 4 ರಿಂದ 5 ಕರಿಬೇವಿನ ಎಲೆಗಳನ್ನು ಎರಡು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತರ ಫಿಲ್ಟರ್ ಮಾಡಿ. ಆ ನೀರಿನಲ್ಲಿ ಒಂದೆರಡು ಹನಿ ನಿಂಬೆ ಹಣ್ಣಿನ ರಸವನ್ನು ಹಿಂಡಿ ಕುಡಿಯಿರಿ. ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಬಹುದು.
ಈ ನೀರನ್ನು ಪ್ರತಿನಿತ್ಯ ಬೆಳಗ್ಗೆ ಕುಡಿಯುವುದರಿಂದ ಬೆಲ್ಲಿ ಫ್ಯಾಟ್ ಕರಗುವುದು. ಹೊಟ್ಟೆಯ ಸುತ್ತಲಿನ ಬೊಜ್ಜು ಮಾಯವಾಗಿ ಜೀರೋ ಫಿಗರ್ ಪಡೆಯಲು ಸಹಕಾರಿಯಾಗಿದೆ.
ಸೂಚನೆ: ಈ ಲೇಖನ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.