ಹೀಗೆ ಸಾಗಿತ್ತು ವಿಜಯ ರಾಘವೇಂದ್ರ - ಸ್ಪಂದನಾ ಬಾಳ ನೌಕೆ ! ಕ್ರೂರ ವಿಧಿ ಹೀಗಾಡಬಾರದಿತ್ತು
ವಿಜಯ ರಾಘವೇಂದ್ರ ಮತ್ತು ಸ್ಪಂದನ ಅವರದ್ದು ಮುದ್ದಾದ ಜೋಡಿ. ಇಬ್ಬರು ಜೊತೆಯಾಗಿ ನಿಂತಿದ್ದರೆ ಒಮ್ಮೆ ದೃಷ್ಟಿ ತೆಗೆಯೋಣ ಅನ್ನಿಸುವಂಥ ಜೋಡಿ ಅದು.
ಈ ಜೋಡಿಯು 2007 ರಲ್ಲಿ ಪ್ರೇಮ ವಿವಾಹವಾಗಿದ್ದು, ಇನ್ನೇನು ತಮ್ಮ 16 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಮುಂದಾಗಿದ್ದರು.
ಇನ್ನೇನು 19 ದಿನಗಳಲ್ಲಿ ಈ ಜೋಡಿ 16 ನೇ ವಿವಾಹ ವಾರ್ಷಿಕೋತ್ಸವ ಆಚರಿಸುವ ತಯಾರಿಯಲ್ಲಿತ್ತು.
ಿಜಯ ರಾಘವೇಂದ್ರ ಪ್ರೇಮಕಥೆಯು ಮಲ್ಲೇಶ್ವರಂನಲ್ಲಿ ಪ್ರಾರಂಭವಾಯಿತು. ಮೊದಲು ಅವರು ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ ಭೇಟಿಯಾಗಿದ್ದು ಅಲ್ಲೇ.
ಮೊದಲ ನೋಟದಲ್ಲೇ ಸ್ಪಂದನಾ ಅವರತ್ತ ಆಕರ್ಷಿತರಾಗಿದ್ದ ವಿಜಯ್, ತನ್ನ ಮನಸ್ಸಿನ ಭಾವನೆ ಹೇಳಿಕೊಳ್ಳಲು ಬಹಳ ಸಮಯ ತೆಗೆದು ಕೊಳ್ಳಲಿಲ್ಲವಂತೆ.
ಗುರು ಹಿರಿಯರ ಆಶೀರ್ವಾದದಿಂದ 2007 ರಲ್ಲಿ ಇವರಿಬ್ಬರ ವಿವಾಹ ಅದ್ದೂರಿಯಾಗಿಯೇ ನೆರವೇರಿತು.
ಇವರಿಬ್ಬರ ಪ್ರೇಮಕ್ಕೆ ಸಾಕ್ಷಿಯಾಗಿ ಒಬ್ಬ ಮಗನಿದ್ದಾನೆ. ಮಗನ ಹೆಸರು ಶೌರ್ಯ.
ವಿಜಯ ರಾಘವೇಂದ್ರ ಮತ್ತು ಸ್ಪಂದನ ನಡುವಿನ ಪ್ರೀತಿ ಅನ್ಯೋನ್ಯತೆ ಎಷ್ಟು ಗಾಢವಾಗಿತ್ತು ಎನ್ನುವುದು ಅನೇಕ ಕಾರ್ಯಕ್ರಮಗಳಲ್ಲಿ ಹೊರ ಹೊಮ್ಮಿತ್ತು.
ತನ್ನ ಜೀವನದಲ್ಲಿ ಸ್ಪಂದನ ಎಷ್ಟು ಮುಖ್ಯ, ಸ್ಪಂದನ ಪಾತ್ರ ಎಷ್ಟು ಮಹತ್ವದ್ದು ಎನ್ನುವುದನ್ನು ವಿಜಯ್ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಸ್ಪಂದನ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಆ ದೇವರು ವಿಜಯ್ ರಾಘವೇಂದ್ರ ಮತ್ತವರ ಕುಟುಂಬಕ್ಕೆ ನೀಡಲಿ..