ಸರ್ಕಾರಿ ನೌಕರರ ಕಾಯುವಿಕೆಗೆ ತೆರೆ !ವೇತನ ಹೆಚ್ಚಳದ ನಿರ್ಧಾರ ಇಂದೇ ಪ್ರಕಟ!ಎಷ್ಟಾಗಲಿದೆ ಏರಿಕೆ ಇಲ್ಲಿದೆ ಲೆಕ್ಕಾಚಾರ
ಕೇಂದ್ರ ಸರ್ಕಾರಿ ನೌಕರರ ಕಾಯುವಿಕೆಗೆ ಅಂತೂ ತೆರೆ ಬೀಳಲಿದೆ.ಇಂದು ಸಂಜೆಯೊಳಗೆ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿಸುದ್ದಿ ನೀಡಲಿದೆ.ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೀಪಾವಳಿ ವೇಳೆಗೆ ವೇತನ ಮತ್ತು ಪಿಂಚಣಿ ಹೆಚ್ಚಳವಾಗಲಿದೆ.
7ನೇ ವೇತನ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ನೌಕರರ ವೇತನ ಹೆಚ್ಚಳವಾಗಲಿದೆ. ಸರ್ಕಾರದ ಆದೇಶ ಇಂದು ಹೊರಬಿದ್ದರೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ.
ಇಂದು ಸಚಿವ ಸಂಪುಟ ಸಭೆ ನಡೆಯಲಿದೆ.ಈ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಲಿದೆ. ನಂತರ ಜುಲೈನಿಂದ ಡಿಎ ಬಾಕಿ ಮೊತ್ತವೂ ನೌಕರರ ಖಾತೆ ಸೇರುವುದು.
ಕೇಂದ್ರ ಸರ್ಕಾರಿ ನೌಕರನ ಮೂಲ ವೇತನವು 18,000 ರೂಪಾಯಿ ಆಗಿದ್ದು, ಡಿಎ ಶೇ.3ರಷ್ಟು ಹೆಚ್ಚಳವಾದರೆ ಅವರ ವೇತನ ತಿಂಗಳಿಗೆ 540 ರೂ.ವಾರ್ಷಿಕ ಹೆಚ್ಚಳ 6,480 ರೂ.ಯಷ್ಟು ಏರಿಕೆ ಕಾಣುತ್ತದೆ.ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳವಾದರೆ ಅವರ ಮಾಸಿಕ ವೇತನ 720 ರೂ.ಮತ್ತು ವಾರ್ಷಿಕ ವೇತನ 7,440 ರೂಪಾಯಿಯಷ್ಟು ಹೆಚ್ಚಳವಾಗಲಿದೆ.
ಪಿಂಚಣಿದಾರರ ಮಾಸಿಕ ಪಿಂಚಣಿಯಲ್ಲೂ ಉತ್ತಮ ಏರಿಕೆಯಾಗಲಿದೆ.ಪಿಂಚಣಿದಾರರ ಮೂಲ ಪಿಂಚಣಿ 25,000 ರೂ.ಆಗಿದ್ದರೆ ಅವರಿಗೆ ಶೇ.50ರ ದರದಲ್ಲಿ12,500 ಸಹಾಯಧನ ನೀಡಲಾಗುತ್ತದೆ.ಈಗ ಡಿಆರ್ ಶೇ.53ಕ್ಕೆ ಹೆಚ್ಚಿಸಿದರೆ ಪಿಂಚಣಿ ಕೂಡಾ 13,250 ರೂ.ಆಗುತ್ತದೆ.
ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇದರಿಂದ ತುಟ್ಟಿಭತ್ಯೆ ಹೆಚ್ಚಳದ ಗ್ಯಾರಂಟಿ ನೀಡುವುದಿಲ್ಲ.ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಅಕ್ಸೆಸ್ ಮಾಡಲು ಶಿಫಾರಸು ಮಾಡಲಾಗಿದೆ.