7th pay commission : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..! ಈ ದಿನಾಂಕದಿಂದ ಸಿಗಲಿದೆ ಡಿಎ.

Thu, 11 Mar 2021-11:26 am,

ಅನುರಾಗ್ ಠಾಕೂರ್ ಲಿಖಿತ ಹೇಳಿಕೆ : ಹಣಕಾಸು ಖಾತೆ ಸಹಾಯಕ ಸಚಿವ ರಾಜ್ಯ ಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಜುಲೈ 1 ರಿಂದ ತುಟ್ಟಿ ಭತ್ಯೆಯ ಮೂರೂ ಕಂತು ಕೂಡಾ ಸಿಗಲು ಶುರುವಾಗುತ್ತದೆ ಎಂದು ಹೇಳಿದ್ದಾರೆ. ಏರಿಕೆಯಾದ ತುಟ್ಟಿಭತ್ಯೆಯನ್ನು ಪಾವತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.  

ಜ.1, 2020 ರಿಂದ ಸಿಗಬೇಕಿತ್ತು ಲಾಭ : ಏರಿಕೆಯಾದ ಡಿಎ ಜನವರಿ 1, 2020ರಿಂದ ಸಿಗಬೇಕಿತ್ತು. ಆದರೆ, ಕರೋನಾ ಮಹಾಮಾರಿ ಕಾರಣದಿಂದ ಮಾರ್ಚ್ 2021ರ ತನಕ ಪಾವತಿಯನ್ನು ತಡೆ ಹಿಡಿದಿತ್ತು. ಸರ್ಕಾರದ ಹೊಸ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರಿಗೆ ಸಾಕಷ್ಟು ವರದಾನವಾಗಲಿದೆ. 

ಈಗ ಶೇ. 17 ರಷ್ಟು ಸಿಗುತ್ತಿದೆ ಡಿಎ : ಕೇಂದ್ರ ನೌಕರರಿಗೆ ಈಗ ಶೇ. 17 ರಷ್ಟು ಡಿಎ ಸಿಗುತ್ತಿದೆ. ವರ್ಷಕ್ಕೆ ಎರಡು ಸಲ ಡಿಎ ಹೆಚ್ಚಾಗುತ್ತದೆ. ಕರೋನಾ ಮಹಾಮಾರಿ ಕಾರಣದಿಂದಾಗಿ ಜುಲಾಯಿ 2020 ರಿಂದ ಜನವರಿ 2021ರ ತನಕ ಡಿಎ ಹೆಚ್ಚಳ ತಡೆಹಿಡಿಯಲಾಗಿತ್ತು. ಒಂದು ವೇಳೆ ಸರ್ಕಾರ ಡಿಎ ಹೆಚ್ಚಳದ ಘೋಷಣೆ ಮಾಡಿದರೆ, ನೌಕರರ ಡಿಎ ಶೇ. 25 ರಷ್ಟು ಏರಿಕೆಯಾಗಲಿದೆ.   

ಹೊಸ ಪೇಮ್ಯಾಟ್ರಿಕ್ಸ್ (Pay matrix ) ಘೋಷಣೆ : 7ನೇ ವೇತನ ಆಯೋಗ ಹೊಸ ಪೇ ಮ್ಯಾಟ್ರಿಕ್ಸ್ ಘೋಷಣೆ ಮಾಡಿದೆ. ಈ ಮೂಲಕ ಸರ್ಕಾರಿ ನೌಕರರು ತಮ್ಮ ಕೆರಿಯರ್ ಆರಂಭದಲ್ಲೇ ಕೆರಿಯರ್ ಉದ್ದಕ್ಕೂ ಆಗಬಹುದಾದ ಗ್ರೋತ್‍ ನ ಲೆಕ್ಕಾಚಾರ ಮಾಡಬಹುದಾಗಿದೆ. ಸಿವಿಲ್ ನೌಕರರು, ಸೇನೆ, ಮಿಲಿಟರಿ ನರ್ಸಿಂಗ್ ಸರ್ವಿಸ್  ನಲ್ಲಿರುವವರಿಗೆ ಬೇರೆ ಬೇರೆ ಪೇ ಮ್ಯಾಟ್ರಿಕ್ಸ್ ಇದೆ. ಇದೇ ಆಧಾರದ ಮೇಲೆ ಸಾಲರಿ ಹೆಚ್ಚಳ ಮಾಡಲಾಗುತ್ತದೆ.

 ಡಬ್ಬಲ್ ಆಗಲಿದೆ ಕನಿಷ್ಠ ವೇತನ : 7ನೇ ವೇತನ ಆಯೋಗದ ಪ್ರಕಾರ ಸರ್ಕಾರಿ ನೌಕರರ ಮಿನಿಮಮ್ ಸಾಲರಿ 7,000ದ ಬದಲಿಗೆ 18 ಸಾವಿರಕ್ಕೆ ಏರಲಿದೆ.  ಅದೇ ರೀತಿ ಕ್ಲಾಸ್ ವನ್ ಆಫಿಸರ್ ಮಿನಿಮಮ್ ವೇತನ 56,100 ರೂಪಾಯಿಗೆ ಏರಿಕೆಯಾಗಲಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link