ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; 56% DA ಹೆಚ್ಚಳ..! ಯಾವ ಆಧಾರದ ಮೇಲೆ DA ನಿರ್ಧರಿಸುತ್ತಾರೆ ಗೊತ್ತಾ?

Wed, 08 Jan 2025-10:39 am,

8ನೇ ವೇತನ ಆಯೋಗ ರಚನೆ ಮಾಡಿ ಅದರ ಶಿಫಾರಸಿನ ಆಧಾರದ ಮೇಲೆ ಮೂಲ ವೇತನ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇಟ್ಟಿರುವ ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ಸಿಹಿ ಸುದ್ದಿ ಸಿಗಲಿದೆ.  

8ನೇ ವೇತನ ಆಯೋಗ ರಚನೆ ಮಾಡದಿದ್ದರೂ, 7ನೇ ವೇತನ ಆಯೋಗದಲ್ಲೇ ಶೇಕಡಾ 56ರಷ್ಟು ತುಟ್ಟಿ ಭತ್ಯೆ (DA) ಹೆಚ್ಚಳ ಮಾಡಬಹುದು ಎಂದು ಹೇಳಲಾಗುತ್ತಿದೆ.

2024ರ ಅಕ್ಟೊಬರ್ ವರೆಗಿನ AICPI ಸೂಚ್ಯಂಕದ ಪ್ರಕಾರ,  ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆಯನ್ನು (DA) ಹೆಚ್ಚು ಮಾಡುವ ಸಾಧ್ಯತೆಗಳು ಕಂಡುಬರುತ್ತಿವೆ.

ಕೇಂದ್ರ ಸರ್ಕಾರಿ ನೌಕರರಿಗೆ 2025ರ ಜನವರಿ 1ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ ಹೆಚ್ಚಳ ಮಾಡಬಹುದು ಎಂದು ಹೇಳಲಾಗುತ್ತಿದೆ.

AICPI ನವೆಂಬರ್ ತಿಂಗಳ ಸೂಚ್ಯಂಕದ ದತ್ತಾಂಶಗಳನ್ನು ಬಿಡುಗಡೆ ಮಾಡಿಲ್ಲ. ಅದನ್ನು ಡಿಸೆಂಬರ್ 31ರೊಳಗೆ ಬಿಡುಗಡೆ ಮಾಡಬೇಕಿತ್ತು.  ಡಿಸೆಂಬರ್ ತಿಂಗಳ ಸೂಚ್ಯಂಕದ ದತ್ತಾಂಶಗಳನ್ನು ಜನವರಿ 31ರೊಳಗೆ ಬಿಡುಗಡೆ ಮಾಡಬಹುದು. ಆಗ ನವೆಂಬರ್ ಮತ್ತು ಡಿಸೆಂಬರ್ ದತ್ತಾಂಶಗಳು ಒಟ್ಟಿಗೆ ಬರುತ್ತವೆ. ಅದನ್ನಾಧರಿಸಿ ತುಟ್ಟಿ ಭತ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.

ಪ್ರತಿ ತಿಂಗಳ ಕೊನೆಯಲ್ಲಿ AICPI ಸೂಚ್ಯಂಕದ ಆಧಾರದ ಮೇಲೆ ನೌಕರರ ತುಟ್ಟಿ ಭತ್ಯೆಯನ್ನು ಲೆಕ್ಕ ಹಾಕಲಾಗುತ್ತದೆ. ಶೇಕಡಾ 1ರಷ್ಟು ತುಟ್ಟಿಭತ್ಯೆ ಹೆಚ್ಚಳವಾದರೂ ಸಂಬಳದಲ್ಲಿ ಭಾರೀ ಏರಿಕೆಯಾಗಲಿದೆ. 

ಈಗಿನ ಮಾಹಿತಿಗಳ ಪ್ರಕಾರ ನವೆಂಬರ್‌ಗೂ ಮುನ್ನವೇ 55% ತುಟ್ಟಿ ಭತ್ಯೆ ಇದ್ದುದರಿಂದ ಡಿಸೆಂಬರ್ ತಿಂಗಳಲ್ಲಿ ಅದು ಶೇಕಡಾ 56ರಷ್ಟಾಗಬಹುದು ಎನ್ನಲಾಗುತ್ತಿದೆ. 

2024ರ ಜುಲೈನಲ್ಲಿ ಶೇಕಡಾ 53ರಷ್ಟು ತುಟ್ಟಿ ಭತ್ಯೆ ಇತ್ತು. ತುಟ್ಟಿಭತ್ಯೆ ನೀಡುವ ಮೂಲಕ ಬೆಲೆ ಏರಿಕೆ ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿರುವ ನೌಕರರ ಹಿತಕಾದಂತಾಗುತ್ತದೆ.

ಕೇಂದ್ರದ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿದರೆ ಅದಕ್ಕೆ ಅನುಗುಣವಾಗಿ ಪಿಂಚಣಿದಾರರ ಪಿಂಚಣಿ ಕೂಡ ಹೆಚ್ಚಾಗುತ್ತದೆ. ಹಾಗಾಗಿ ಹಿರಿಯ ನಾಯಕರು ಕೂಡ ಅಪಾರ ನಿರೀಕ್ಷೆಯಿಂದ ಎದುರುನೋಡುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link