ಲಕ್ಷ್ಮಿ ದೇವಿಯ ಕೃಪೆ ಪಡೆಯಲು ಶುಕ್ರವಾರದಂದು ಈ ವಸ್ತುಗಳನ್ನು ದಾನ ಮಾಡಿ

Fri, 16 Sep 2022-10:57 am,

ಖೀರ್ - ಬಿಳಿ ಬಣ್ಣದ ವಸ್ತುಗಳು ತಾಯಿ ಲಕ್ಷ್ಮಿಗೆ ತುಂಬಾ ಪ್ರಿಯವೆಂದು ನಂಬಲಾಗಿದೆ. ಆದ್ದರಿಂದ, ಪೂಜೆಯ ನಂತರ ತಾಯಿ ಲಕ್ಷ್ಮಿಗೆ ಬಿಳಿ ಬಣ್ಣದ ವಸ್ತುಗಳನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಪಡೆಯಲು ಶುಕ್ರವಾರದಂದು ಖೀರ್ ಅನ್ನು ನೇವೇದ್ಯವಾಗಿ ಅರ್ಪಿಸಿ. ಇದರ ನಂತರ, ಈ ಖೀರ್ ಅನ್ನು ಬಡವರಿಗೆ ಹಂಚಿರಿ. 

ಶೃಂಗಾರ ಸಾಮಾಗ್ರಿ - ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಶುಕ್ರವಾರ ಬಹಳ ವಿಶೇಷ ದಿನವಾಗಿದೆ. ಈ ದಿನ, ವಿವಾಹಿತ ಮಹಿಳೆಯರು ತಮ್ಮ ಕೈಗಳಿಂದ ಕೆಂಪು ಬಳೆಗಳು, ಕುಂಕುಮ, ಕೆಂಪು ಸೀರೆ, ಕೆಂಪು ಬಿಂದಿ, ಮೆಹಂದಿ ಮುಂತಾದ ಶೃಂಗಾರ ಸಾಮಾಗ್ರಿಗಳನ್ನೂ ದಾನ ಮಾಡುವುದು ತುಂಬಾ ಶುಭ ಎಂದು ಹೇಳಲಾಗುತ್ತದೆ.  ಹೀಗೆ ಮಾಡುವುದರಿಂದ ವೈವಾಹಿಕ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. 

ಬಿಳಿಯ ವಸ್ತುಗಳನ್ನು ದಾನ ಮಾಡುವುದು- ಲಕ್ಷ್ಮಿ ತಾಯಿಗೆ ಬಿಳಿ ಬಣ್ಣದ ವಸ್ತುಗಳು ತುಂಬಾ ಪ್ರಿಯ ಎಂಬುದು ಧಾರ್ಮಿಕ ನಂಬಿಕೆ. ಹಾಗಾಗಿಯೇ ಲಕ್ಷ್ಮಿ ದೇವಿಯ ಪೂಜೆಯಲ್ಲಿ ಹೆಚ್ಚು ಹೆಚ್ಚು ಬಿಳಿ ಬಣ್ಣದ ವಸ್ತುಗಳನ್ನು ಬಳಸಬೇಕು. ಶುಕ್ರವಾರದಂದು ಅಲ್ಲದೆ, ಬಿಳಿ ವಸ್ತುಗಳ ದಾನವು ತುಂಬಾ ಫಲಪ್ರದವಾಗಿದೆ. ಈ ದಿನ ಅಕ್ಕಿ, ಸಕ್ಕರೆ, ಹಾಲು, ಖೀರ್, ಮೊಸರು, ಬೆಳ್ಳಿ, ಬಿಳಿ ಚಂದನ ಇತ್ಯಾದಿಗಳನ್ನು ದಾನ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತದೆ ಮತ್ತು ಶುಕ್ರ ದೋಷದಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.

ವಸ್ತ್ರದಾನ - ಶುಕ್ರವಾರದಂದು ವಸ್ತ್ರದಾನ ಮಾಡುವುದರಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ ಮತ್ತು ಭಕ್ತರ ಮೇಲೆ ಆಶೀರ್ವಾದವನ್ನು ನೀಡುತ್ತಾಳೆ ಎಂಬ ನಂಬಿಕೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಮಹಿಳೆಯರು ತಮ್ಮ ಹತ್ತಿರದ ಸಂಬಂಧಿಕರಿಗೆ ರೇಷ್ಮೆ ಬಟ್ಟೆಗಳನ್ನು ದಾನ ಮಾಡಬಹುದು ಅಥವಾ ಉಡುಗೊರೆಯಾಗಿ ನೀಡಬಹುದು. ಇದರಿಂದ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ. ಜೊತೆಗೆ ದಾಂಪತ್ಯ ಜೀವನವೂ ಸುಖಮಯವಾಗುತ್ತದೆ ಎಂದು ಹೇಳಲಾಗುತ್ತದೆ.

ಉಪ್ಪಿನ ದಾನ - ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಪರಿಹಾರಗಳನ್ನು ಹೇಳಲಾಗಿದೆಯಾದರೂ, ದಾನದ ವಿಧಾನವು ಅತ್ಯಂತ ಸುಲಭ ಮತ್ತು ಅತ್ಯಂತ ಪರಿಣಾಮಕಾರಿಯಾಗಿದೆ. ಶುಕ್ರವಾರದಂದು ಉಪ್ಪನ್ನು ದಾನ ಮಾಡುವುದು ವಿಶೇಷವಾಗಿ ಮಂಗಳಕರವಾಗಿದೆ. ಹೀಗೆ ಮಾಡುವುದರಿಂದ ಶುಕ್ರ ಗ್ರಹದ ದೋಷ ದೂರವಾಗುತ್ತದೆ ಎಂದು ನಂಬಲಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link