ಚಿಕ್ಕ ವಯಸ್ಸಿನಲ್ಲೇ ʼದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿʼ ಪಡೆದ ಪುಷ್ಪಾ ಡೈರೆಕ್ಟರ್ ಪುತ್ರಿ ಸುಕೃತಿ..!
ಸುಕುಮಾರ್ ಪುಷ್ಪಾ ಮೊದಲ ಭಾಗ ಸಖತ್ ಸದ್ದು ಮಾಡಿತ್ತು ಇದೀಗ ಭಾಗ 2 ಬಿಡುಗಡೆಗೆ ರೆಡಿಯಾಗಿದೆ.. ಪುಷ್ಪರಾಜ್ ಪಾತ್ರದಲ್ಲಿ ನಟಿಸಿರುವ ಅಲ್ಲು ಅರ್ಜುನ್ ಅಭಿನಯ ದೇಶವನ್ನೇ ಹುಚ್ಚೆಬ್ಬಿಸಿತ್ತು. ಬನ್ನಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಈಗ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಪುಷ್ಪ 2 ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟು ಹಾಕಿದೆ. ಇದರ ಮಧ್ಯ ಸುಕುಮಾರ್ ಪುತ್ರಿ ಸುಕೃತಿ ವೇಣಿಗೆ ಅತ್ಯುನ್ನತ ಪ್ರಶಸ್ತಿ ಲಭಿಸಿದೆ.
ಸದ್ಯ, ಸುಕುಮಾರ್ ಟಾಲಿವುಡ್ ಇಂಡಸ್ಟ್ರಿಯ ಟಾಪ್ ನಿರ್ದೇಶಕರಲ್ಲಿ ಒಬ್ಬರು. ಅವರು ಆರ್ಯ ಚಿತ್ರದ ಮೂಲಕ ತಮ್ಮನ್ನು ನಿರ್ದೇಶಕರಾಗಿ ಪರಿಚಯಿಸಿಕೊಂಡರು ಮತ್ತು ಪುಷ್ಪ ಚಿತ್ರದ ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು. ಸುಕುಮಾರ್ ನಿರ್ಮಾಣದ ಪುಷ್ಪಾ ದೇಶಾದ್ಯಂತ ಸಂಚಲನ ಮೂಡಿಸಿತ್ತು.
ಇದೀಗ ಸುಕುಮಾರ್ ಪುತ್ರಿ ಸುಕೃತಿ ವೇಣಿಗೆ ಅತ್ಯುನ್ನತ ಪ್ರಶಸ್ತಿ ಲಭಿಸಿದೆ. ಗಾಂಧಿ ತಾತ ಚೆಟ್ಟು ಚಿತ್ರದಲ್ಲಿ ಸುಕೃತಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಸುಕೃತಿ ಅತ್ಯುತ್ತಮ ಬಾಲನಟಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುಕೃತಿ ತನ್ನ ತಾಯಿ ತಬಿತಾ ಸುಕುಮಾರ್ ಅವರೊಂದಿಗೆ ಭಾಗವಹಿಸಿದ್ದರು. ಗಾಂಧಿ ತಾತ ಚೆಟ್ಟು ಚಿತ್ರದಲ್ಲಿ ಸುಕೃತಿ ವೇಣಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಅನೇಕ ಅಂತರರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತು.
ಪರಿಸರ ಸಂರಕ್ಷಣೆಯ ಮುಖ್ಯ ಉದ್ದೇಶದಿಂದ ನಿರ್ಮಿಸಲಾದ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್, ಸುಕುಮಾರ್ ರೈಟಿಂಗ್ಸ್ ಮತ್ತು ಗೋಪಿ ಟಾಕೀಸ್ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರವು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲದೆ, ಚಿತ್ರವು ದುಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಭಾರತೀಯ ಚಲನಚಿತ್ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಬಾಲನಟಿಯಾಗಿ ಸುಕೃತಿ ಪ್ರಶಸ್ತಿ ಪಡೆದರು.