ಒಂದು ಲೋಟ ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗುತ್ತೆ: ಮಂಡಿನೋವು ಕೂಡ ನಿವಾರಣೆಯಾಗುತ್ತೆ!
ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು, ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಕಡಿಮೆ ಕೊಬ್ಬಿನಂಶವಿರುಚ ಆಹಾರ ಪದಾರ್ಥಗಳನ್ನು ಸೇವಿಸಿದರೆ, ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಬಹುದು.
ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಡೈರಿ ಉತ್ಪನ್ನಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಒಣದ್ರಾಕ್ಷಿಯನ್ನು ಸೇವಿಸಿದರೆ ಯೂರಿಕ್ ಆಮ್ಲದ ಮಟ್ಟ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ, ಇದರಲ್ಲಿರುವ ಪ್ರೋಟೀನ್ ಮೂಳೆಗಳನ್ನು ಬಲಪಡಿಸುತ್ತದೆ. ನೋವು ಮತ್ತು ಊತದಿಂದ ಪರಿಹಾರವನ್ನು ನೀಡುತ್ತದೆ.
ಇನ್ನು ಇದರಲ್ಲದೆ, ಯೂರಿಕ್ ಆಮ್ಲವನ್ನು ಸಮತೋಲನಗೊಳಿಸಲು, ಮಜ್ಜಿಗೆ ಕುಡಿಯಬಹುದು. ಇದಕ್ಕೆ ಕಾಮಕಸ್ತೂರಿ ಬೀಜ ಬೆರೆಸಿ ಕುಡಿದರೆ ಮತ್ತಷ್ಟು ಪ್ರಯೋಜನ ಪಡೆಯಬಹುದು. ಮಜ್ಜಿಗೆ ಕುಡಿದರೆ, ದೇಹದಲ್ಲಿ ಸಾಕಷ್ಟು ಪ್ರಮಾಣದ ನೀರು ನಿರ್ವಹಿಸಲ್ಪಡುತ್ತದೆ ಮತ್ತು ಮೂಳೆಗಳು ಸಹ ಪೋಷಣೆಯನ್ನು ಪಡೆಯುತ್ತವೆ. ಪ್ರಮುಖ ಆರೋಗ್ಯ ವೆಬ್‌ಸೈಟ್ 'ಹೆಲ್ತ್‌ಲೈನ್' ವರದಿಯ ಪ್ರಕಾರ, ಮಜ್ಜಿಗೆಯಂತಹ ಡೈರಿ ಉತ್ಪನ್ನಗಳು ಮೂತ್ರದ ಮೂಲಕ ದೇಹದಿಂದ ಯೂರಿಕ್ ಆಮ್ಲವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಕೊಬ್ಬು ರಹಿತ ಚೀಸ್ ತಿನ್ನುವುದು ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಹೆಚ್ಚಿನ ಯೂರಿಕ್ ಆಸಿಡ್ ಹೊಂದಿದ್ದರೆ, ಅವರೆಕಾಳು, ರಾಜ್ಮಾ ಕೂಡ ಸೇವಿಸಬಹುದು. ಈ ಕಾಳುಗಳು ನಮ್ಮ ಯೂರಿಕ್ ಆಸಿಡ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ.
ಕೊಬ್ಬು ರಹಿತ ಚೀಸ್ ತಿನ್ನುವುದು ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಹೆಚ್ಚಿನ ಯೂರಿಕ್ ಆಸಿಡ್ ಹೊಂದಿದ್ದರೆ, ಅವರೆಕಾಳು, ರಾಜ್ಮಾ ಕೂಡ ಸೇವಿಸಬಹುದು. ಈ ಕಾಳುಗಳು ನಮ್ಮ ಯೂರಿಕ್ ಆಸಿಡ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ.
ಸಿಟ್ರಸ್ ಹಣ್ಣುಗಳು ಸಹ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಬಹಳ ಪ್ರಯೋಜನಕಾರಿ. ಆದರೆ ಆ ಹಣ್ಣುಗಳು ತುಂಬಾ ಸಿಹಿಯಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.