Beetroot Disadvantages: ಈ ಕಾಯಿಲೆ ಇರುವವರು ಅಪ್ಪಿತಪ್ಪಿಯೂ ಬೀಟ್ರೂಟ್ ಸೇವಿಸಬಾರು.. ಇದು ವಿಷಕ್ಕೆ ಸಮಾನ!!

Thu, 11 Apr 2024-4:18 pm,

ಸಮತೋಲಿತ ಆಹಾರ ಸೇವಿಸಿದರೆ ಅನೇಕ ರೋಗಗಳು ಬರುವುದಿಲ್ಲ ಎನ್ನುತ್ತಾರೆ.. ತಾಜಾ ಹಣ್ಣುಗಳು, ತರಕಾರಿಗಳನ್ನು ಸೇವಿಸುವಂತೆ ಸಲಹೆ ನೀಡಲಾಗುತ್ತದೆ.. ಏಕೆಂದರೆ ಇದು ಔಷಧೀಯ ಗುಣಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಕೆಲವರಿಗೆ ಬೀಟ್ರೂಟ್ ಸೆಟ್ ಆಗುವುದಿಲ್ಲ. ಇದರಲ್ಲಿರುವ ಕೆಲವು ಅಂಶಗಳಿಂದ ಅವರ ದೇಹಕ್ಕೆ ಹಾನಿಯಾಗಬಹುದು..   

ಕಿಡ್ನಿ ಸ್ಟೋನ್‌ ಸಮಸ್ಯೆ: ಮೂತ್ರಪಿಂಡದ ಕಲ್ಲುಗಳನ್ನು ಹೊಂದಿರುವ ಜನರು ಬೀಟ್ರೂಟ್ ಸೇವನೆಯನ್ನು ಕಡಿಮೆ ಮಾಡಬೇಕು... ಏಕೆಂದರೆ ಆಕ್ಸಲೇಟ್ ಮೂತ್ರದಲ್ಲಿ ಹರಳುಗಳನ್ನು ರೂಪಿಸುತ್ತದೆ. ಈ ಹರಳುಗಳು ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವಾಗುತ್ತವೆ.   

ಅಧಿಕ ಅಥವಾ ಕಡಿಮೆ ಬಿಪಿ: ಅಧಿಕ ಅಥವಾ ಕಡಿಮೆ ಬಿಪಿ ಇರುವವರು ಮತ್ತು ಔಷಧಿ ತೆಗೆದುಕೊಳ್ಳುತ್ತಿರುವವರು ಬೀಟ್ರೂಟ್ ತಿನ್ನಬಾರದು.. ಏಕೆಂದರೆ ಇದರಲ್ಲಿರುವ ಕೆಲವು ಅಂಶಗಳು ತಲೆ ತಿರುಗುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ..   

ಜೀರ್ಣಕ್ರಿಯೆ ಸಮಸ್ಯೆ: ಜೀರ್ಣ ಶಕ್ತಿಯ ಕೊರತೆ ಇರುವವರಿಗೆ ಬೀಟ್ರೂಟ್‌ ಸೇವನೆ ಒಳ್ಳೆಯದಲ್ಲ. ಇದರನಲ್ಲಿ ನಾರಿನಂಶ ಅಧಿಕವಾಗಿದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಗ್ಯಾಸ್, ಅಜೀರ್ಣ ಅಥವಾ ಅತಿಸಾರ ಸಮಸ್ಯೆಗಳು ಉಂಟಾಗಬಹುದು.  

ಅಲರ್ಜಿ ಸಮಸ್ಯೆ: ಅಲರ್ಜಿ ಇರುವವರು ಬೀಟ್‌ರೂಟ್‌ನ್ನು ಎಂದಿಗೂ ಸೇವಿಸಬಾರದು.. ಇದರಿಂದ ತುರಿಕೆ, ದದ್ದು, ಊತ ಅಥವಾ ಉಸಿರಾಟದ ತೊಂದರೆಯುಂಟಾಗಬಹುದು..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link