Dangerous Spiders: ವಿಷಕಾರಿ ಹಾವುಗಳಂತೆ ಈ ಅಪಾಯಕಾರಿ ಜೇಡಗಳು ಕಚ್ಚಿದ್ರೆ ಸಾವು ಗ್ಯಾರಂಟಿ!
Brown Recluse Spiders ಜೇಡಗಳಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಈ ಜೇಡಗಳು ಕತ್ತಲಿರುವ ಸ್ಥಳಗಳಲ್ಲಿ ವಾಸಿಸುತ್ತವೆ. ಈ ಜೇಡಗಳು ಹೆಚ್ಚಾಗಿ ಅಮೆರಿಕದಲ್ಲಿ ಕಂಡುಬರುತ್ತವೆ. ಇದರ ವಿಷದಿಂದ ಮನುಷ್ಯರು ಸಾಯಬಹುದು ಎಂದು ಹೇಳಲಾಗಿದೆ.
Black Widow Spider ಜೇಡವು ಸಾಮಾನ್ಯವಾಗಿ ಉತ್ತರ ಅಮೆರಿಕಾ ಮತ್ತು ಕೆನಡಾದಲ್ಲಿ ಕಂಡುಬರುತ್ತದೆ. ಇದು ನೀಲಿ ಬಣ್ಣದ್ದಾಗಿದೆ. ಈ ಜೇಡವು ವಿಷಕಾರಿಯಾಗಿದೆ. ಹೆಣ್ಣು ಜೇಡವನ್ನು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇದರ ವಿಷವು ಹಾವಿನಷ್ಟೇ ಅಪಾಯಕಾರಿ ಎಂದು ಹೇಳಲಾಗುತ್ತದೆ.
Funnel web spiders ಜೇಡಗಳು ಸಾಮಾನ್ಯವಾಗಿ ನ್ಯೂಜಿಲೆಂಡ್, ಚಿಲಿ, ಆಸ್ಟ್ರೇಲಿಯಾ ಮತ್ತು ಯುರೋಪ್ನಲ್ಲಿ ಕಂಡುಬರುತ್ತವೆ. ಇದರಲ್ಲಿ ಗಂಡು ಜೇಡವನ್ನು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಕಚ್ಚಿದರೆ ತಕ್ಷಣದ ಚಿಕಿತ್ಸೆ ಅಗತ್ಯವಿರುತ್ತದೆ, ಇಲ್ಲದಿದ್ದರೆ ಸಾವು ಕೂಡ ಸಂಭವಿಸಬಹುದು.
ವಿಶ್ವದ ಅತ್ಯಂತ ಮಾರಣಾಂತಿಕ ಜೇಡಗಳಲ್ಲಿ Hobo spider ಕೂಡ ಒಂದು. ಇವು ನೋಡಲು Brown Recluse Spidersನಂತೆ ಕಾಣುತ್ತವೆ. Hobo spider ಕಡಿತವು ಊತವನ್ನು ಉಂಟುಮಾಡುತ್ತದೆ ಮತ್ತು ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ. Hobo spider ಕಡಿತವು ಚಿಕ್ಕ ಮಕ್ಕಳ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ.
Yellow sac spider ಚಿರಕಾಂತಿಡೆ (Chiracanthidae) ಕುಟುಂಬಕ್ಕೆ ಸೇರಿದೆ. ಈ ಜೇಡಗಳು ಇತರ ಜೇಡಗಳಿಗಿಂತ ಮನುಷ್ಯರನ್ನು ಹೆಚ್ಚು ಕಚ್ಚುತ್ತವೆ. ಈ ಜೇಡಗಳು ಉತ್ತರ ಆಫ್ರಿಕಾ, ಅಮೆರಿಕ ಮತ್ತು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕಂಡುಬರುತ್ತವೆ.