Astro Tips: ಈ 3 ದೊಡ್ಡ ಗ್ರಹಗಳ ಮೈತ್ರಿಯಿಂದ ದೇಶದಲ್ಲಿ ಭೂಕಂಪ-ಆರ್ಥಿಕ ಬಿಕ್ಕಟ್ಟು ಸಾಧ್ಯತೆ!

Thu, 16 Mar 2023-7:33 pm,

ಮೇಷ ರಾಶಿಯಲ್ಲಿ ಸೂರ್ಯ-ಗುರು-ರಾಹು ಸಂಯೋಗದ ಋಣಾತ್ಮಕ ಪರಿಣಾಮಗಳು ಹಲವು ರೀತಿಯಲ್ಲಿ ಕಂಡುಬರುತ್ತವೆ. ಈ 3 ಗ್ರಹಗಳ ಮೈತ್ರಿಯಿಂದಾಗಿ ರಾಜಕೀಯ ಮೇಲಾಟ ಕಾಣಬಹುದು. ಅಷ್ಟೇ ಅಲ್ಲ ಸರ್ಕಾರದ ಯಾವುದೇ ಪ್ರಮುಖ ನಿರ್ಧಾರ ಸಾರ್ವಜನಿಕರನ್ನು ಕೆರಳಿಸುವ ಸಾಧ್ಯತೆಯೂ ಇದೆ. ಆ ವೇಳೆ ಸಾರ್ವಜನಿಕರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಲಿದ್ದಾರೆ.

ಜ್ಯೋತಿಷ್ಯದಲ್ಲಿ ದೇವ ಗುರು ಗುರುವನ್ನು ಆಯಸ್ಸು ಒದಗಿಸುವ ಮತ್ತು ಜೀವನದ ರಕ್ಷಕನೆಂದು ಪರಿಗಣಿಸಲಾಗುತ್ತದೆ. ರಾಹುವಿನೊಡನೆ ಇರುವುದರಿಂದಲೇ ದೇಶ-ಪ್ರಪಂಚದಲ್ಲಿ ಮಾರಕ ರೋಗ ಬರಬಹುದು, ಇದರಿಂದ ಸಾವಿರಾರು ಜನರ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ‍್ಯತೆ ಇರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 22ರಂದು ಮೇಷ ರಾಶಿಯಲ್ಲಿ ಸೂರ್ಯ, ರಾಹು ಮತ್ತು ಗುರುಗಳ ಸಂಯೋಜನೆಯು ದೇಶ ಮತ್ತು ಪ್ರಪಂಚದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಈ ಸಮಯದಲ್ಲಿ ಬಹಳಷ್ಟು ನಕಾರಾತ್ಮಕ ಪರಿಣಾಮಗಳು ಕಂಡುಬರುತ್ತವೆ. ಈ ವೇಳೆ ಭಾರೀ ಅಗ್ನಿ ಅವಘಡ ಸಂಭವಿಸಬಹುದು ಎಂದು ನಂಬಲಾಗಿದೆ. ಯಾವುದೇ ಕಾಡಿನಲ್ಲಿ ಬೆಂಕಿ ಹೊತ್ತಿಕೊಳ್ಳುವ ಘಟನೆ ಇತ್ಯಾದಿ ಸುದ್ದಿಯಾಗಬಹುದು.

ಈ ಗ್ರಹಗಳ ಸಂಯೋಗದ ಸಮಯದಲ್ಲಿ ಅನೇಕ ದೇಶಗಳ ಆರ್ಥಿಕ ಸ್ಥಿತಿಯ ಮೇಲೆ ಬಿಕ್ಕಟ್ಟು ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಈ ಅವಧಿಯಲ್ಲಿ ಷೇರುಪೇಟೆ ಮತ್ತು ಚಿನ್ನದ ಬೆಲೆಯಲ್ಲಿ ಹಠಾತ್ ದೊಡ್ಡ ಕುಸಿತ ಕಂಡುಬರಲಿದೆ. ಇದು ವಿಶ್ವಾದ್ಯಂತ ಆರ್ಥಿಕ ಬಿಕ್ಕಟ್ಟನ್ನು ಆಹ್ವಾನಿಸುತ್ತದೆ.

ಮೇಷ ರಾಶಿಯಲ್ಲಿ ಈ 3 ಗ್ರಹಗಳ ಸಂಯೋಜನೆಯು ಭೂಮಿಯ ಯಾವುದೇ ಪ್ರದೇಶದಲ್ಲಿ ಭೂಕಂಪ, ಸುನಾಮಿ ಮತ್ತು ಜ್ವಾಲಾಮುಖಿಯಂತಹ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ.

ಈ 3 ಗ್ರಹಗಳ ಮೈತ್ರಿಯು ಮೇಷ ರಾಶಿಯಲ್ಲಿ ಏಪ್ರಿಲ್ 22ರಂದು ಸಂಭವಿಸಲಿದೆ. ಈ ಸಮಯದಲ್ಲಿ ಬೇರೆ ದೇಶದಲ್ಲಿ ಯುದ್ಧದ ಸಾಧ್ಯತೆ ಇರುತ್ತದೆ. ಪ್ರಸ್ತುತ ರಷ್ಯಾ ಮತ್ತು ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ. ಭಾರತದ ಯಾವುದೇ ನೆರೆಯ ರಾಷ್ಟ್ರದೊಂದಿಗೆ ಸಂಘರ್ಷ ನಡೆಯಬಹುದು ಎಂದು ನಂಬಲಾಗಿದೆ. ಪ್ರಮುಖ ಭಯೋತ್ಪಾದಕ ಘಟನೆಯೂ ಸಂಭವಿಸಬಹುದು ಎನ್ನಲಾಗುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link