ಉಪ್ಪಿಗೆ ಈ ಎಲೆಯ ರಸ ಮಿಕ್ಸ್ ಮಾಡಿ ಹಚ್ಚಿ: ಕ್ಷಣಾರ್ಧದಲ್ಲಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿಕೂದಲು! ಸೊಂಪಾಗಿ ಉದ್ದವಾಗಿ ಬೆಳೆಯುತ್ತೆ ಸಹ
ಸಾಮಾನ್ಯವಾಗಿ ಬಿಳಿ ಕೂದಲನ್ನು ಮರೆಮಾಡಲು ಹೇರ್ ಡೈ ಅಥವಾ ರಾಸಾಯನಿಕ ಆಧಾರಿತ ಕೂದಲಿನ ಬಣ್ಣವನ್ನು ಬಳಸಬೇಕಾಗುತ್ತದೆ, ಆದರೆ ಇದು ಕೂದಲನ್ನು ನಿರ್ಜೀವವಾಗಿ ಕಾಣುವಂತೆ ಮಾಡುತ್ತದೆ. ಇವುಗಳ ಬದಲು ಕೆಲ ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು. ನಾವಿಂದು ಈ ವರದಿಯಲ್ಲಿ ಕೆಲ ಮನೆಮದ್ದುಗಳನ್ನು ತಿಳಿಸಿಕೊಡಲಿದ್ದೇವೆ. ಇದರಿಂದ ಶೀಘ್ರ ಉಪಶಮನ ಪಡೆಯಬಹುದು.
ಈರುಳ್ಳಿ ರಸ ಮತ್ತು ಆಲಿವ್ ಎಣ್ಣೆ: ಬಿಳಿ ಕೂದಲನ್ನು ಕಡಿಮೆ ಮಾಡಲು ಈರುಳ್ಳಿ ರಸ ಪ್ರಯೋಜನಕಾರಿ. ಇದು ಕೂದಲಿನ ಬೆಳವಣಿಗೆಗೂ ಸಹಕಾರಿ. ಇನ್ನು ಆಲಿವ್ ಎಣ್ಣೆಯಲ್ಲಿ ಈರುಳ್ಳಿ ರಸ ಮತ್ತು ನಿಂಬೆ ರಸವನ್ನು ಬೆರೆಸಿ ತಲೆಗೆ ಮಸಾಜ್ ಮಾಡಿದರೆ ಬಿಳಿಕೂದಲು ಶೀಘ್ರವೇ ಮಾಯವಾಗುತ್ತದೆ. ಜೊತೆಗೆ ಇದು ಕೂದಲನ್ನು ಬಲಪಡಿಸುತ್ತದೆ.
ಬ್ಲ್ಯಾಕ್ ಟೀ: ಬ್ಲ್ಯಾಕ್ ಟೀಯನ್ನು ಬಳಸಿಕೊಂಡು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಇವುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣಗಳು ಹೇರಳವಾಗಿದ್ದು, ಕೂದಲನ್ನು ಕಪ್ಪಾಗಿಸಲು ನೆರವಾಗುತ್ತದೆ. ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ 2 ಚಮಚ ಬ್ಲ್ಯಾಕ್ ಟೀ ಮತ್ತು ಒಂದು ಚಮಚ ಉಪ್ಪನ್ನು ಹಾಕಿ ಕುದಿಸಿ. ಈಗ ಅದನ್ನು ಫಿಲ್ಟರ್ ಮಾಡಿ, ಈ ನೀರು ತಣ್ಣಗಾದ ನಂತರ ಅದನ್ನು ಕೂದಲಿಗೆ ಹಚ್ಚಿ.
ತೆಂಗಿನ ಎಣ್ಣೆ ಮತ್ತು ನಿಂಬೆ ರಸ: ತೆಂಗಿನ ಎಣ್ಣೆ ನೈಸರ್ಗಿಕವಾಗಿ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ ಕೂದಲಿಗೆ ಮಸಾಜ್ ಮಾಡಿದರೆ, ಬಿಳಿಕೂದಲನ್ನು ಕಡಿಮೆ ಮಾಡಬಹುದು.
ಶುಂಠಿ ಮತ್ತು ಜೇನುತುಪ್ಪ: ಶುಂಠಿ ಮತ್ತು ಜೇನುತುಪ್ಪದ ಸಂಯೋಜನೆಯು ಕೂದಲನ್ನು ಕಪ್ಪಾಗಿಸಲು ತುಂಬಾ ಪರಿಣಾಮಕಾರಿ. ಶುಂಠಿಯನ್ನು ತುರಿದು ಅದಕ್ಕೆ ಜೇನುತುಪ್ಪ ಬೆರೆಸಿ. ಈಗ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. ಸುಮಾರು ಅರ್ಧ ಗಂಟೆಯ ನಂತರ ತೊಳೆಯಿರಿ. ಈ ಪ್ರಕ್ರಿಯೆಯನ್ನು ವಾರಕ್ಕೆ ಎರಡು ಬಾರಿಯಾದರೂ ಅನುಸರಿಸಿದರೆ ಉತ್ತಮ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.