ಮೆಹಂದಿ ಅಗತ್ಯವಿಲ್ಲ! ಚಳಿಗಾಲದಲ್ಲಿ ಈ `ಹೇರ್ ಮಾಸ್ಕ್` ಬಳಸಿದರೆ ಬಿಳಿ ಕೂದಲೂ ಕಪ್ಪಾಗುತ್ತೆ, ಶೀತ, ನೆಗಡಿಯ ಚಿಂತೆಯೂ ಇರಲ್ಲ..!
ಬಿಳಿ ಕೂದಲನ್ನು ನಿವಾರಿಸಲು ಮೆಹಂದಿ ಅತ್ಯುತ್ತಮ ಪರಿಹಾರವಾಗಿ. ಆದರೂ, ಚಳಿಗಾಲದಲ್ಲಿ ಶೀತ, ನೆಗಡಿ ಅಪಾಯದಿಂದ ಹೆನ್ನಾ ಹೇರ್ ಪ್ಯಾಕ್ ಹಾಕಲು ಹಿಂಜರಿಯುತ್ತಾರೆ.
ವಾಸ್ತವವಾಗಿ, ಮೆಹಂದಿ ಅಥವಾ ಗೋರಂಟಿ ತಂಪಾಗಿರುತ್ತದೆ. ಹಾಗಾಗಿ, ಚಳಿಗಾಲದಲ್ಲಿ ಕೂದಲಿಗೆ ಮೆಹಂದಿ ಹೇರ್ ಪ್ಯಾಕ್ ಬಳಸುವುದರಿಂದ ಕೆಲವರಿಗೆ ಶೀತ, ನೆಗಡಿ, ಅನಾರೋಗ್ಯದ ಅಪಾಯಗಳು ಹೆಚ್ಚಾಗಿರುತ್ತದೆ.
ಆದರೆ, ನೀವು ಮೆಹಂದಿ ಹಾಕದೆಯೂ ನಿಮ್ಮ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು. ಅದೂ ಸಹ ಯಾವುದೇ ಅಡ್ಡಪರಿಣಾಮಗಳಾಗದಂತೆ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಬಹುದು.
ಮೆಹಂದಿ ಬಳಸದೆಯೂ ಸಹ ನೈಸರ್ಗಿಕವಾಗಿ ನಿಮ್ಮ ಬೂದು/ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಚಳಿಗಾಲದಲ್ಲಿ ಮೆಹಂದಿ ಬದಲಿಗೆ ಇಂಡಿಗೋ ಪೌಡರ್ ಮತ್ತು ಕಾಫಿ ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಮೆಹಂದಿಯಂತೆಯೇ ಕಾಫಿ ಮತ್ತು ಇಂಡಿಗೋ ಪೌಡರ್ ಮಿಶ್ರಣ ಮಾಡಿ ಹೇರ್ ಮಾಸ್ಕ್ ಆಗಿ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಜೊತೆಗೆ ಚಳಿಗಾಲದಲ್ಲಿ ಶೀತದ ಅಪಾಯವೂ ಇರುವುದಿಲ್ಲ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.