ಕೇವಲ 10 ನಿಮಿಷಗಳಲ್ಲಿ ಬಿಳಿ ಕೂದಲನ್ನು ಶಾಶ್ವತವಾಗಿ ಕಡು ಕಪ್ಪಾಗಿಸಿ! ದಷ್ಟಪುಷ್ಟ ಕಾಂತಿಯುತ ಕೂದಲನ್ನು ಹೊಂದಲು ಮನೆಮದ್ದು..!
)
ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ, ಇಲ್ಲವೇ ಮೆಹಂದಿಯನ್ನು ಬಳಸಲಾಗುತ್ತದೆ. ಆದರೆ, ಇದು ನಿಮ್ಮ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುವುದಿಲ್ಲ.
)
ನೀವು ಮೆಹಂದಿ ಬದಲಿಗೆ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
)
ನೀವು ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಮನೆಮದ್ದನ್ನು ತಯಾರಿಸಲು ಬೇಕಾಗುವ ಪದಾರ್ಥಗಳೆಂದರೆ... * 1 ಸ್ಪೂನ್ ಟೀ ಪುಡಿ * 1 ಸ್ಪೂನ್ ಅರಿಶಿನ ಪುಡಿ * 1 ಸ್ಪೂನ್ ಕಾಫಿ ಪುಡಿ * 2 ಸ್ಪೂನ್ ಅಲೋವೆರಾ ಜೆಲ್ * 1 ವಿಟಮಿನ್ ಈ ಕ್ಯಾಫ್ಸುಲ್
ನೈಸರ್ಗಿಕ ಹೇರ್ ಡೈ ತಯಾರಿಸಲು ಮೊದಲಿಗೆ ಒಂದು ದೋಸೆ ತವವನ್ನು ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಚೆನ್ನಾಗಿ ಕಾಯಿಸಿ. ಬಳಿಕ ಇದರ ಮೇಲೆ ಒಂದು ಸ್ಪೂನ್ ಟೀ ಸೊಪ್ಪು ಹಾಗೂ ಒಂದು ಸ್ಪೂನ್ ಅರಿಶಿನವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇವೆರಡೂ ಕಡು ಕಪ್ಪಾಗುವವರೆಗೂ ಸಣ್ಣ ಉರಿಯಲ್ಲಿಯೇ ಹುರಿಯಬೇಕು.
ಟೀ ಮತ್ತು ಅರಿಶಿನ ಪುಡಿ ಪೂರ್ತಿ ಕಪ್ಪಾದ ಬಳಿಕ ಅದನ್ನು ಹೆಂಚಿನ ಮೇಲೆಯೇ ಹರಡಿ ಹಾಗೆ ತಣ್ಣಗಾಗಲು ಬಿಡಿ. ನಂತರ ಒಂದು ಬಟ್ಟಲಿನಲ್ಲಿ ಒಂದು ಸ್ಪೂನ್ ಇನ್ಸ್ಟಾಂಟ್ ಕಾಫಿ ಪುಡಿ ಹಾಕಿ, ಇದರಲ್ಲಿ ಈಗಾಗಲೇ ತಯಾರಿಸಿಟ್ಟಿರುವ ಟೀ, ಅರಿಶಿನ ಪುಡಿ ಹಾಗೂ 2 ಸ್ಪೂನ್ ಅಲೋವೆರಾ ಜೆಲ್, ಒಂದು ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ತಯಾರಿಸಿಟ್ಟ ಹೇರ್ ಡೈ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಲಘುವಾಗಿ ಮಸಾಜ್ ಮಾಡಿ.
ಬಿಳಿ ಕೂದಲಿಗೆ ಈ ಮನೆಮದ್ದನ್ನು ಬಳಸುವುದರಿಂದ ಕೇವಲ 10 ನಿಮಿಷಗಳಲ್ಲಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು. ಜೊತೆಗೆ ಕೂದಲುದುರುವ ಸಮಸ್ಯೆ ನಿವಾರಣೆಯಾಗಿ ಕೂದಲು ದಟ್ಟವಾಗಿ, ಕಾಂತಿಯುತವಾಗಿ ಬೆಳೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.