ಸಲಾರ್ ಬಜೆಟ್ 400 ಕೋಟಿ.. ಆದ್ರೆ ಪ್ರಭಾಸ್‌, ಶ್ರುತಿ ಹಾಸನ್‌ ಪಡೆದ ಸಂಭಾವನೆ ಎಷ್ಟು ಗೊತ್ತಾ?

Mon, 18 Dec 2023-11:58 pm,

ಪ್ರಭಾಸ್ : ಡಾರ್ಲಿಂಗ್‌ ಪ್ರಭಾಸ್ ಸಲಾರ್ ಚಿತ್ರದಲ್ಲಿ ನಟಿಸಲು 100 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.   

ಪೃಥ್ವಿರಾಜ್ ಸುಕುಮಾರನ್: ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನಟ ಪೃಥ್ವಿರಾಜ್ ಸುಕುಮಾರನ್ ಸಲಾರ್‌ ಸಿನಿಮಾದಲ್ಲಿ ನಟಿಸಲು 4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.   

ಜಗಪತಿ ಬಾಬು: ಭಾರತೀಯ ಚಿತ್ರರಂಗದ ಪ್ರಸಿದ್ಧ ಹೆಸರು ಜಗಪತಿ ಬಾಬು. ಸಲಾರ್ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಜಗಪತಿ ಬಾಬು 4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.    

ಪ್ರಶಾಂತ್ ನೀಲ್: ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಿತ್ರದ ಮೂಲಕ ಪ್ರಸಿದ್ಧರಾಗಿದ್ದಾರೆ. ಸಲಾರ್ ಸಿನಿಮಾವನ್ನು ಇವರೇ ನಿರ್ದೇಶನ ಮಾಡಿದ್ದು, 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಶ್ರುತಿ ಹಾಸನ್: ಪ್ರಭಾಸ್ ಜೊತೆ ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್ ಅಧ್ಯಾ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು 8 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.  

ಸಲಾರ್ ರಿಲೀಸ್‌ ಡೇಟ್‌ : ಸಲಾರ್ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 22 ರಂದು ಥಿಯೇಟರ್‌ಗಳಿಗೆ ಬರಲಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link