ದರ್ಶನ್ ಅವರ ಈ ವಿಚಾರದಲ್ಲಿ ʻಸುದೀಪ್ʼ ಮಧ್ಯೆ ಹೋಗಿದ್ದಕ್ಕೇ ಸ್ನೇಹ ಮುರಿದು ಬಿತ್ತಾ!?
)
ರೇಣುಕಾ ಸ್ವಾಮಿ ಕೊಲೆ ಮಾಡಿದ ಆರೋಪದ ಮೇಲೆ ನಟ ದರ್ಶನ್ ಬಂಧನದ ಬಗ್ಗೆ ಕಿಚ್ಚ ಸುದೀಪ್ ಇದೇ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. ಫ್ರೆಂಡ್ಶಿಪ್ ಬೇರೆ ನ್ಯಾಯ ಬೇರೆ ಎಂದಿದ್ದಾರೆ.
)
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಅನ್ಯಾಯ ಆದವರಿಗೆ ನ್ಯಾಯ ಸಿಗೋದು ಮುಖ್ಯ. ಪೊಲೀಸರು ಹಾಗೂ ಮಾಧ್ಯಮಗಳು ಸತ್ಯ ಹೊರತರುವ ಕೆಲಸ ಮಾಡುತ್ತಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ.
)
ಇದೇ ವೇಳೆ ದರ್ಶನ್ ಕೌಟುಂಬಿಕ ಕಲಹದ ಬಗ್ಗೆಯೂ ನಟ ಸುದೀಪ್ ಮಾತನಾಡಿದ್ದಾರೆ. 2011ರಲ್ಲಿ ನಡೆದ ವಿಚಾರವನ್ನು ಮಾತನಾಡಿದ್ದಾರೆ. ಕೌಟುಂಬಿಕ ಕಲಹದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.
ಕೌಟುಂಬಿಕ ಜಗಳ ನಡೆಸಾಗ ಸಂಧಾನ ಮಾಡಲು ಹೋದವರೇ ಕೊನೆಗೆ ಕೆಟ್ಟವರಾದರು. ಬಳಿಕ ಅವರು ಒಂದಾದರು. ಯಾರೋ ಒಬ್ಬರು ಬಂದು ಚೆನ್ನಾಗಿ ಹೊಡೀತಾನೆ ಅಂದರು. ಇನ್ನೊಬ್ಬರ ಮನೆಗೆ ಹೋಗಿ ನೋವು ಹೇಳಿಕೊಂಡರು ಎಂದು ಸುದೀಪ್ ಹೇಳಿದ್ದಾರೆ.
ಆ ಬಳಿಕ ಸಂಧಾನ ಮಾಡಲು ಹೋದವರೇ ದೂರವಾದರು ಎಂದು ಪರೋಕ್ಷವಾಗಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಕೌಟುಂಬಿಕ ಕಲಹದ ಬಗ್ಗೆ ಸುದೀಪ್ ಮಾತಾನಾಡಿದ್ದಾರೆ.
ಈ ಹೇಳಿಕೆ ಬಳಿಕ ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರನ್ನು ಸುದೀಪ್ ಒಂದು ಮಾಡಲು ಪ್ರಯತ್ನಿಸಿದ್ದರಾ? ಈ ಜಗಳದಲ್ಲಿ ಸುದೀಪ್ ಸಂಧಾನ ಮಾಡುವ ಯತ್ನ ಮಾಡಿದ್ದರಾ? ಇದೇ ಕಾರಣಕ್ಕೆ ಸುದೀಪ್ ದರ್ಶನ್ ಸ್ನೇಹ ಮುರಿದು ಬಿತ್ತಾ? ಎಂಬ ಪ್ರಶ್ನೆಗಳು ಉದ್ಭವಿಸಿವೆ.