Darshan Birthday Special: ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್...ʼಡೆವಿಲ್ʼ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್!
ಹುಟ್ಟುಹಬ್ಬದ ಸಂಭ್ರಮದ ನಡುವೆಯೇ ದರ್ಶನ್ ನಟನೆಯ ಡೆವಿಲ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿದೆ.
ಈ ಚಿತ್ರದ ಟೀಸರ್ ಫಸ್ಟ್ ಲುಕ್ ಭರ್ಜರಿಯಾಗಿ ಮೂಡಿ ಬಂದಿದ್ದು.. ಡಿಬಾಸ್ ಹಿಂದೆಂದೂ ಕಂಡಿರದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ಬಿಡುಗಡೆಯಾದ ಟೀಸರ್ ಅಭಿಮಾನಿಗಳ ಗಮನ ಸೆಳೆದಿದೆ. ಡಿಬಾಸ್ ಫ್ಯಾನ್ಸ್ ಅವರ ಹಾವ-ಭಾವ.. ನಟನೆಗೆ ಫಿದಾ ಆಗೋದಂತೂ ಫಿಕ್ಸ್ ಎನ್ನಲಾಗುತ್ತಿದೆ..
ಸದ್ಯ ತಮ್ಮ ನೆಚ್ಚಿನ ನಟನ ಬರ್ತಡೇ ಸೆಲೆಬ್ರೇಷನ್‌ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಡೆವಿಲ್ ಚಿತ್ರತಂಡ ಭರ್ಜರಿ ಗಿಫ್ಟ್ ನೀಡಿದೆ.
ಇನ್ನು ಡಿ ಬಾಸ್ ಅಭಿಮಾನಿಗಳು ಅವರಿಗೆ ಸೋಷಿಯಲ್ ಮಿಡಿಯಾದ ಮೂಲಕ ಶುಭಾಷಯಗಳನ್ನು ತಿಳಿಸುವುದಲ್ಲದೇ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ