ಬಾಸ್ ಕೆಟ್ಟದ್ದು ಮಾಡಿರಬಹುದು.. ಆದರೆ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ.. ಜೈಲಿನ ಬಳಿ ಕಣ್ಣೀರಿಟ್ಟ ದರ್ಶನ್‌ ಅಭಿಮಾನಿಗಳು!!

Sun, 23 Jun 2024-3:20 pm,

ನಟ ದರ್ಶನ್‌ ಹಾಗೂ ಗ್ಯಾಂಗ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ.. ಒಂದಷ್ಟು ಜನ ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಿದ್ದರೆ.. ಮತ್ತೊಂದಷ್ಟು ಜನ ಅವರು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ ಅವರು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ..  

ನಟ ದರ್ಶನ್‌ ಅವರನ್ನು ಸದ್ಯ ಪರಪ್ಪನ ಅಗ್ರಹಾರದಲ್ಲಿ ಇರಿಸಲಾಗಿದೆ.. ಈ ವೇಳೆ ದರ್ಶನ್ ಭೇಟಿಗಾಗಿ ರಾಯಚೂರಿನ ಲಿಂಗಸಗೂರಿನಿಂದ ಅಭಿಮಾನಿಗಳು ಆಗಮಿಸಿದ್ದಾರೆ.. ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದು ನಟ ದರ್ಶನ್‌ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ..   

ನಮ್ಮ ಬಾಸ್‌ ಕೆಟ್ಟದ್ದು ಮಾಡಿರಬಹುದು ಆದರೆ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ.. ನಟ ದರ್ಶನ್‌ನಂತೆ ಅವರ ಅಭಿಮಾನಿಗಳು ಸಹ ಕೆಟ್ಟವರು ಎನ್ನುತ್ತಿದ್ದಾರೆ.. ನಾವು ರಾಯಚೂರಿನಿಂದ ಬಾಸ್ ನೋಡಲು ಆಗಮಿಸಿದ್ದೆವೆ.. ಹಾಗಾದ್ರೆ ನಾವು ಕೆಟ್ಟವರಾ? ಎಂದು ಪ್ರಶ್ನೆ ಮಾದ್ಯಮಗಳ ಮುಂದೆ ಪ್ರಶ್ನೆ ಮಾಡುತ್ತಿದ್ದಾರೆ.,   

ಅಲ್ಲದೇ ಇಂದು ರಜೆ ಹಿನ್ನೆಲೆ ಬಾಸ್ ಭೇಟಿಗೆ ಅವಕಾಶ ನೀಡುತ್ತಿಲ್ಲ.. ನಾವು ನಾಳೆ ಬಾಸ್ ಭೇಟಿ ಮಾಡಿಯೇ ವಾಪಸ್ ಹೊರಡೊದು.. ಎಂದು ದರ್ಶನ್‌ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನ ಬಳಿ ಪಟ್ಟು ಹಿಡಿದು ಕುಳಿತಿದಿದ್ದಾರೆ..   

ನಟ ದರ್ಶನ್‌ ಹಾಗೂ ಗ್ಯಾಂಗ್‌ ಸದ್ಯ ಜೈಲು ಪಾಲಾಗಿದ್ದು, ಈ ವೇಳೆ ದರ್ಶನ್‌ ನಿದ್ದೆ, ಊಟ ಯಾವುದನ್ನು ಸರಿಯಾಗಿ ಮಾಡುತ್ತಿಲ್ಲ.. ಬಿಟ್ಟು ಬಿಡದ ವಿಚಾರಣೆಯಿಂದಾಗಿ ಮಾನಸಿಕ ಹಾಗೂ ದೈಹಿಕವಾಗಿ ದರ್ಶನ್‌ ದಣಿದಿದ್ದಾರೆ ಎಂದು ಮೂಲಗಳು ತಿಳಿಸಿವೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link