ದಚ್ಚು, ದಾಸ, ಡಿ ಬಾಸ್ ಎಂದೆಲ್ಲಾ ಕರೆಯಲ್ಪಡುವ ದರ್ಶನ್ ನಿಜವಾದ ಹೆಸರೇನು ಗೊತ್ತಾ? ತೂಗುದೀಪ ಅನ್ನೋದು ಮನೆತನದ ಹೆಸರೇ ಅಲ್ಲ...
ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟರಲ್ಲಿ ದರ್ಶನ್ ಕೂಡ ಒಬ್ಬರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದೇ ಖ್ಯಾತಿ ಪಡೆದಿರುವ ಇವರ ನಿಜನಾಮ ಅನೇಕರಿಗೆ ತಿಳಿದಿಲ್ಲ. ಈ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಕೊಡಗಿನ ಪೊನ್ನಂಪೇಟೆಯಲ್ಲಿ 1977 ಫೆಬ್ರುವರಿ 16ರಂದು ಜನಿಸಿದ ದರ್ಶನ್, ಇಂದು ಕನ್ನಡ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿ ದುಡಿಯುತ್ತಿದ್ದಾರೆ. ಆದರೆ ಪ್ರಸ್ತುತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ ದರ್ಶನ್,
ನಟ ತೂಗುದೀಪ ಶ್ರೀನಿವಾಸ್ ಅವರ ಮಗ ದರ್ಶನ್ ಅವರ ನಟನಾ ವೃತ್ತಿಯನ್ನು 1990ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು. ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. ಅದಾದ ನಂತರ 2001ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ ದರ್ಶನ್, ಅಭಿಮಾನಿ ಬಳಗವನ್ನೇ ಪಡೆದರು.
ಕರಿಯಾ, ನಮ್ಮ ಪ್ರೀತಿಯ ರಾಮು, ಕಲಾಸಿಪಾಳ್ಯ, ಗಜ, ಸಾರಥಿ ಮತ್ತು ಬುಲ್ ಬುಲ್ʼನಂತಹ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾರಥಿ ಮತ್ತು ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿನ ಅಭಿನಯಕ್ಕಾಗಿ ವಿಮರ್ಶಕರಿಂದ ಭಾರೀ ಪ್ರಶಂಸೆ ಕೂಡ ವ್ಯಕ್ತವಾಗಿತ್ತು.
ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿ ಹಿರಿಯ ಮಗನಾಗಿ ಫೆಬ್ರುವರಿ 16, 1977 ರಲ್ಲಿ ಜನಿಸಿದ ದರ್ಶನ್ ನಿಜವಾದ ಹೆಸರು ಹೇಮಂತ್ ಕುಮಾರ್. ಅಷ್ಟೇ ಅಲ್ಲದೆ, ತೂಗುದೀಪ ಎಂಬುದು ಇವರ ಮನೆತನದ ಹೆಸರಲ್ಲ. ಬದಲಾಗಿ ಅದೊಂದು ಸಿನಿಮಾ.
1966ರಲ್ಲಿ ಶ್ರೀನಿವಾಸ್ ಅವರು ನಟಿಸಿ ಪ್ರಸಿದ್ಧಿ ಪಡೆದ ಸಿನಿಮಾವೇ ʼತೂಗುದೀಪʼ. ಇದಾದ ಬಳಿಕ ಆ ಸಿನಿಮಾದ ಹೆಸರು ಶ್ರೀನಿವಾಸ್ ಹೆಸರಿನ ಜೊತೆ ಸೇರಿಕೊಂಡಿತು.