ಕಾಮನ್‌ ಸೆನ್ಸ್‌ ಇಲ್ಲದಿರೋ ದರ್ಶನ್‌ಗೆ ದುಡ್ಡಿನ ಧಿಮಾಕಿನಿಂದ ಈ ಸ್ಥಿತಿ ಬಂದಿದೆ: ಮುಖ್ಯಮಂತ್ರಿ ಚಂದ್ರು

Thu, 08 Aug 2024-4:10 pm,

ಗೆಳತಿ ಪವಿತ್ರಾಗೌಡಳಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆಂಬ ಕಾರಣಕ್ಕೆ ದರ್ಶನ್‌ ಅಂಡ್‌ ಗ್ಯಾಂಗ್‌ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡಿ ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿದೆ. ಸದ್ಯ ಇದೇ ಪ್ರಕರಣ ಸಂಬಂಧ ಪವಿತ್ರಾಗೌಡ, ದರ್ಶನ್‌ ಸೇರಿದಂತೆ ಒಟ್ಟು ೧೮ ಆರೋಪಿಗಳು ಪರಪ್ಪನ ಅಗ್ರಹಾರ ಜೈಲುವಾಸ ಅನುಭವಿಸುವಂತಾಗಿದೆ. ಇದರ ಬಗ್ಗೆ ಮಾತನಾಡಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ʼದರ್ಶನ್‌ಗೆ ಕಾಮನ್‌ಸೆನ್ಸ್‌ ಇದಿದ್ರೆ ಹೀಗಾಗುತಿತ್ತಾ? ಆತನ ಹತ್ತಿರ ದುಡ್ಡಿದೆ ಅಷ್ಟೇ, ಬೌದ್ಧಿಕ ಪ್ರಜ್ಞೆಯೇ ಇಲ್ಲ, ಆತನಿಗೆ ಕಾಮನ್‌ ಸೆನ್ಸ್‌ ಇಲ್ಲ. ಆತ ಕೊಲೆಪಾತಕಿಯಾ? ಅಥವಾ ಪ್ರೊಫೆಷನಲ್‌ ಮರ್ಡರರ್‌? ಆದರೆ ಆತ ಕೊಲೆ ಮಾಡಿದ್ದಾನೆಂದರೆ ಕ್ರೌರತ್ವ ಹೇಗೆ ಬಂತು? ಧೀಮಾಕು, ದುರಹಂಕಾರ ಹಾಗೂ ಅನುಭವದ ಕೊರತೆಯಿಂದ ಇಷ್ಟೆಲ್ಲಾ ಆಗಿದೆ ಅಂತಾ ಹೇಳಿದ್ದಾರೆ.

ದರ್ಶನ್‌ ಅನ್ನೋದಕ್ಕಿಂತ ಈ ರೀತಿಯ ಘಟನೆಗಳು ನಡೆಯಲೇಬಾರದು. ಇದು ಬರೀ ಕೊಲೆ ಅಲ್ಲ, ಇವರೂ ಮೂಲತಃ ಕೊಲೆಗಾರರಲ್ಲ ಹಾಗೂ ಸೈಕಿಕ್‌ ಅಲ್ಲ. ಆ ಟೀಮ್‌ನಲ್ಲಿ ಇರುವವರು ಯಾರೂ ಕೊಲೆಗಾರರಲ್ಲ. ಆ ಕೊಲೆ ಆಗಿಹೋಗಿದೆ. ಅದೇ ರೀತಿ ಕೊಲೆಯಾದ ವ್ಯಕ್ತಿ ಮಾಡಿದ್ದೂ ಮಹಾ ಅಪರಾಧವೇ. ಅದೇ ರೀತಿ ಇಲ್ಲಿ ಪವಿತ್ರಾಗೌಡ ಬಗ್ಗೆ ಹೇಳಲು ಸಾಧ್ಯವಿಲ್ಲ. ಅದು ಅವರ ವೈಯಕ್ತಿಕ ವಿಚಾರ. ಆದರೆ ಇಲ್ಲಿ ಅವಳದ್ದೂ ತಪ್ಪಿದೆ. ಮದುವೆಯಾದ ವ್ಯಕ್ತಿ ಹಾಗೂ ಡಿವೋರ್ಸ್‌ ಆಗದ ವ್ಯಕ್ತಿಯನ್ನು ಲವ್‌ ಮಾಡುವುದು ಇನ್ನೊಂದು ಅಪರಾಧ. ಇದೆಲ್ಲಾ ನೋಡಿದ್ರೆ ಸಾಮಾಜಿಕ ದೃಷ್ಟಿಯನ್ನಿಟ್ಟುಕೊಂಡು ಕಾನೂನು ಒಂದು ನಿರ್ಧಾರಕ್ಕೆ ಬರಬೇಕು ಅಂತಾ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.   

ವರನಟ ಡಾ.ರಾಜ್‌ಕುಮಾರ್‌ಗೂ ಕೋಪ ಬಂದಿಲ್ವಾ? ಅಮರಶಿಲ್ಪಿ ಜಕಣಾಚಾರಿ ಸಿನಿಮಾ ಶೂಟಿಂಗ್‌ ವೇಳೆ ಮೇಕಪ್‌ ಮಾಡಿಕೊಂಡು ರೆಡಿಯಾಗಿದ್ದ ರಾಜ್‌ಕುಮಾರ್‌ಗೆ ಅವಮಾನ ಮಾಡಲಾಗಿತ್ತು. ಮೇಕಪ್‌ ಅಳಿಸಿಬಿಟ್ಟು ಕಲ್ಯಾಣ್‌ ಕುಮಾರ್‌ಗೆ ಆ ಪಾತ್ರ ಕೊಟ್ಟಾಗ ರಾಜ್‌ಕುಮಾರ್‌ಗೆ ಹೇಗಾಗಿರಬೇಡ? ಇನ್ನೇನು ಪಾತ್ರ ಮಾಡಬೇಕು ಅನ್ನೋ ಸಮಯದಲ್ಲಿ ಬೇಡ ಅಂದ್ರೆ ಅವರ ಮನಸ್ಥಿತಿ ಹೇಗಿರಬೇಡ? ಅದನ್ನೇ ಅವರು ತಾಳ್ಮೆಯಿಂದ ಪರಿಹರಿಸಿಕೊಂಡರು. ಮುಂದೆ ಒಳ್ಳೆಯ ನಟನಾಗಿ, ಒಳ್ಳೆಯ ನಡವಳಿಕೆಯಿಂದ ಕಲ್ಯಾಣಕುಮಾರ್‌ರನ್ನು ಮೀರಿಸಿ ದೊಡ್ಡ ನಟನಾದರು. ನಮ್ಮ ಎದುರಿನ ಪ್ರತ್ಯಕ್ಷ ಉದಾಹರಣೆ ಇದು ಅಂತಾ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.  

ನಟ ದರ್ಶನ್‌ ತಂದೆ ತೂಗುದೀಪ ಶ್ರೀನಿವಾಸ್‌ ಅವರು ಕೌಟುಂಬಿಕ ವಿಚಾರದಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತಿದ್ದರು. ಅವರು ಹೊರಗೆ ಏನೇ ಮಾಡ್ತಿದ್ದರೂ ತಮ್ಮತನವನ್ನು ಉಳಿಸಿಕೊಂಡಿದ್ದರು. ಒಂದು ವೇಳೆ ಇದೀಗ ಅವರು ಬದುಕಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು, ಇಲ್ಲ ಮಗ ಅನ್ನೋ ಮಮಕಾರಕ್ಕೆ ಯಾರನ್ನಾದರೂ ಹಿಡ್ಕೊಂಡು ಆತನನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದರು. ನಾನು ತೂಗುದೀಪ ಶ್ರೀನಿವಾಸರ ಜೊತೆ 25ಕ್ಕೂ ಅಧಿಕ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ಅವರು ನನಗಿಂತ 10 ವರ್ಷ ದೊಡ್ಡವರಾದರೂ ನೋಡುಗರಿಗೆ ಸಮಕಾಲೀನರು ಅಂತಾ ಅನಿಸುತ್ತಿತ್ತು. ಶೂಟಿಂಗ್‌ ವೇಳೆ ಶ್ರೀನಿವಾಸ್ ಅವರಿಗೆ ಸಿಟ್ಟು ಬರ್ತಿತ್ತು. ದರ್ಶನ್‌ಗೆ ಯಾವ ರೀತಿ ಇದೆಯೋ ಆ ರೀತಿಯೇ ಇತ್ತು. ಆದರೆ ಅದು ನೆಗಟಿವ್‌ ಆಗಿರಲಿಲ್ಲ. ಊಟ ಸರಿಯಾಗಿ ಕೊಡದಿದ್ದರೆ, ಶೂಟಿಂಗ್‌ ಸಮಯ ಹಾಳು ಮಾಡಿದ್ರೆ ಅವರು ಸಿಟ್ಟು ಮಾಡಿಕೊಳ್ಳುತ್ತಿದ್ದರು. ಅದನ್ನು ಬಿಟ್ಟು ಅವರಲ್ಲಿ ಬೇರೆ ಸಿಟ್ಟು ಕಾಣಿಸುತ್ತಿರಲಿಲ್ಲ ಅಂತಾ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ. 

ಹಣ ಸಿಗ್ತಿದ್ದಂತೆ ಮೂಲ ದರ್ಶನ್‌ ಕಳೆದುಹೋಗಿಬಿಟ್ಟ. ನೇಮು ಫೇಮು ಸಿಕ್ತಿದ್ದಂತೆ, ಫ್ಯಾನ್ಸ್‌ ಜಾಸ್ತಿಯಾಗಿದ್ದಂತೆ ಮೊದಲಿನ ದರ್ಶನ್‌ ವರ್ತನೆಯಲ್ಲಿ ಬದಲಾವಣೆಯಾಯಿತು. ಸಹವಾಸ ದೋಷವೂ ಇದಕ್ಕೆ ಮುಖ್ಯ ಕಾರಣ. ಆತ ಮನುಷ್ಯತ್ವವನ್ನು ಕಳೆದುಕೊಳ್ಳುತ್ತ ಹೋದ. ನಡವಳಿಕೆಯಲ್ಲಿ ವ್ಯತ್ಯಾಸ ಆಗ್ತಾ ಹೋಯ್ತು. ಮನುಷ್ಯನಾಗಿದ್ದಿದ್ದರೆ ಆತನಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಕಾನೂನಿನ ಮೊರೆ ಹೋಗಿ ಪೊಲೀಸರ ಮುಂದಿಟ್ಟಿದ್ದರೆ ಈ ಸಮಸ್ಯೆಯೇ ಬರುತ್ತಿರಲಿಲ್ಲ. ಸಿಟ್ಟಿನಲ್ಲಿ ಮಾಡಬಾರದ ಕೆಲಸವನ್ನು ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಈ ಕೊಲೆ ನಡೆದಿಲ್ಲ. ಆದರೆ ಕೊಲೆ ಕೊಲೆಯೇ ಅಂತಾ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link