ಕೋಟಿಗಟ್ಟಲೆ LinkedIn ಬಳಕೆದಾರರ Data Leak ..!
LinkedIn ನ ಸುಮಾರು 500 ಮಿಲಿಯನ್ ಬಳಕೆದಾರರ ಡೇಟಾ ಸೋರಿಕೆಯಾಗಿದೆ. ಈ ಸಾಮಾಜಿಕ ಮಾಧ್ಯಮ ವೇದಿಕೆಯಿಂದ ಜನರ ಪ್ರೊಫೈಲ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ಇಟಾಲಿಯನ್ ಖಾಸಗಿ ತನಿಖಾ ಸಂಸ್ಥೆ ಲಿಂಕ್ಡ್ಇನ್ ಡೇಟಾ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿದೆ ಎಂಬ ಸುದ್ದಿ ಇದೆ.
ಪ್ರಪಂಚದಾದ್ಯಂತದ ಹೆಚ್ಚಿನ ವೃತ್ತಿಪರರು LinkedInನಲ್ಲಿ ಉದ್ಯೋಗಗಳಿಗಾಗಿ ತಮ್ಮ ಪ್ರೊಫೈಲ್‌ಗಳನ್ನು ಅಪ್‌ಲೋಡ್ ಮಾಡುತ್ತಾರೆ. ಪ್ರಪಂಚದ ಎಲ್ಲಾ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಹುಡುಕಲು LinkedIn ಅನ್ನು ಬಳಸುತ್ತವೆ.
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಫೇಸ್‌ಬುಕ್‌ನಿಂದ ಇತ್ತೀಚೆಗೆ 53.3 ಕೋಟಿ ಬಳಕೆದಾರರ ಡೇಟಾ ಸೋರಿಕೆಯಾಗಿತ್ತು.
ಮಾಹಿತಿಯ ಪ್ರಕಾರ, ಭಾರತೀಯ ಪೇಮೆಂಟ್ ಅಪ್ಲಿಕೇಶನ್ Mobikwikನಿಂದ ಅನೇಕ ಬಳಕೆದಾರರ ಡೇಟಾ ಕೂಡ ಸೋರಿಕೆಯಾಗಿದೆ.