ಮದುವೆಗೂ ಮುನ್ನ 3-4 ಜನರ ಜೊತೆ ಡೇಟಿಂಗ್; ವಿರಾಟ್ ಕೊಹ್ಲಿ ಅನುಷ್ಕಾರಿಗೆ ಫಸ್ಟ್ ಲವ್ ಅಲ್ಲ!
ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಅನುಷ್ಕಾ ಶರ್ಮಾ ಆರಂಭಿಕ ದಿನಗಳಲ್ಲಿ ಜೋಹೆಬ್ ಯೂಸುಫ್ ಎಂಬುವರ ಜೊತೆ ಸಂಬಂಧ ಹೊಂದಿದ್ದಳಂತೆ. ಫ್ಯಾಷನ್ ಶೋವೊಂದರಲ್ಲಿ ಇಬ್ಬರೂ ಭೇಟಿಯಾದರು. ಅನುಷ್ಕಾ ರನ್ನು ಮುಂಬೈಗೆ ಕರೆತಂದಿದ್ದೇ ಈ ಜೋಹೆಬ್ ಎಂದು ಹೇಳಲಾಗಿದೆ. ವೃತ್ತಿಜೀವನ ಸಂಬಂಧ ಈ ಜೋಡಿ ಪರಸ್ಪರ ದೂರವಾಗುವಂತಾಯಿತು ಎಂದು ಹೇಳಲಾಗಿದೆ.
ಜೋಹೆಬ್ ಯೂಸುಫ್‌ನಿಂದ ದೂರವಾದ ಬಳಿಕ ಅನುಷ್ಕಾ ಹಲವಾರು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದರು. "ಬ್ಯಾಂಡ್ ಬಾಜಾ ಬಾರಾತ್" ಚಿತ್ರದ ಮೂಲಕ ಅನುಷ್ಕಾಗೆ ರಣವೀರ್ ಸಿಂಗ್ ಪರಿಚಯವಾಯಿತು. ಈ ಸಿನಿಮಾದ ಎಲೆಕ್ಟ್ರಿಫೈಯಿಂಗ್ ಕೆಮಿಸ್ಟ್ರಿಯ ಮೂಲಕ ಈ ಜೋಡಿಯ ಆನ್-ಸ್ಕ್ರೀನ್ ಪ್ರಣಯವು ಆಫ್-ಸ್ಕ್ರೀನ್ ಸಂಬಂಧದ ವದಂತಿಗಳನ್ನು ಹುಟ್ಟುಹಾಕಿತ್ತು. ಈ ಜೋಡಿ ಡೇಟಿಂಗ್ ನಡೆಸುತ್ತಿದೆ ಎಂದು ಗಾಸಿಪ್ ಹರಡಿತು. ನಂತರ ಜೋಯಾ ಅಖ್ತರ್ ಅವರ "ದಿಲ್ ಧಡಕ್ನೆ ದೋ"ನಲ್ಲಿ ಈ ಜೋಡಿ ತೆರೆಯ ಮೇಲೆ ಮತ್ತೆ ಒಂದಾಯಿತು. ಆದರೆ ಈ ಜೋಡಿ ಎಂದಿಗೂ ತಮ್ಮ ಡೇಟಿಂಗ್ ಬಗ್ಗೆ ಅಧಿಕೃತ ಹೇಳಿಕೆ ನೀಡಲಿಲ್ಲ.
ರಣವೀರ್ ಸಿಂಗ್ ಬಳಿಕ ಅನುಷ್ಕಾ ಶರ್ಮಾರ ಹೆಸರು ನಟ ಶಾಹಿದ್ ಕಪೂರ್ ಜೊತೆಗೆ ಥಳಕು ಹಾಕಿಕೊಂಡಿತ್ತು. "ಬದ್ಮಾಶ್ ಕಂಪನಿ" ಚಿತ್ರೀಕರಣದ ಸಮಯದಲ್ಲಿ ಈ ಜೋಡಿ ಡೇಟಿಂಗ್ ನಡೆಸುತ್ತಿದೆ ಎಂಬ ಗಾಳಿಸುದ್ದಿ ಹರಡಿತ್ತು. ಆದರೆ ಈ ಜೋಡಿ ಈ ಬಗ್ಗೆ ಯಾವುದೇ ರೀತಿ ಅಧಿಕೃತ ಹೇಳಿಕೆ ನೀಡಿಲಿಲ್ಲ.
ಶಾಹಿದ್ ಕಪೂರ್ ನಂತರ ಅನುಷ್ಕಾ ಶರ್ಮಾರ ಹೆಸರು ನಟ ರಣಬೀರ್ ಕಪೂರ್ ಜೊತೆಗೆ ಥಳಕು ಹಾಕಿಕೊಂಡಿತ್ತು. ಈ ಜೋಡಿ ಒಟ್ಟಿಗೆ ಸುತ್ತಾಡುತ್ತಿರುವ ಸುದ್ದಿ ಸಖತ್ ಸೌಂಡ್ ಮಾಡಿತ್ತು. ಈ ಜೋಡಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಅನೇಕ ಬಾರಿ ಸುದ್ದಿಯಾಗಿತ್ತು. ಆದರೆ ಇವರಿಬ್ಬರ ಸಂಬಂಧದ ಸತ್ಯವು ನಿಗೂಢವಾಗಿಯೇ ಉಳಿಯಿತು.
ಭಾರತೀಯ ಕ್ರಿಕೆಟ್ ಸುರೇಶ್ ರೈನಾರ ಜೊತೆಗೂ ನಟಿ ಅನುಷ್ಕಾರ ಹೆಸರು ಥಳಕು ಹಾಕಿಕೊಂಡಿತ್ತು. ಈ ಜೋಡಿ ಪರಸ್ಪರ ಡೇಟಿಂಗ್ ನಡೆಸುತ್ತಿದೆ ಅಂತಾ ಸಖತ್ ಸುದ್ದಿಯಾಗಿತ್ತು. ಒಂದು ಹಂತದಲ್ಲಿ ಅನುಷ್ಕಾಳನ್ನು ರೈನಾ ಮದುವೆ ಆಗುತ್ತಾರೆಂದು ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಈ ಜೋಡಿ ಯಾವುದೇ ರೀತಿ ಅಧಿಕೃತ ಹೇಳಿಕೆ ನೀಡಲಿಲ್ಲ. ಇದು ಗಾಳಿಸುದ್ದಿ ಅಷ್ಟೇ ಎಂಬ ವಿಚಾರ ಹೊರಬಂದಿತು.
ರಣವೀರ್ ಸಿಂಗ್ ಜೊತೆಗಿನ ಬ್ರೇಕಪ್ ನಂತರ ಅನುಷ್ಕಾ ಶರ್ಮಾ ಅವರು ನಟ ಅರ್ಜುನ್ ಕಪೂರ್‌ಗೆ ಹತ್ತಿರವಾದರು. ಈ ಜೋಡಿಯ ಸ್ನೇಹವು ಎಂದಿಗೂ ಪ್ರಣಯ ಸಂಬಂಧವಾಗಿ ಬೆಳೆಯಲಿಲ್ಲ. ಇವರಿಬ್ಬರೂ ಸೌಹಾರ್ದಯುತ ಸಂಬಂಧ ಉಳಿಸಿಕೊಂಡು ವೃತ್ತಿಪರವಾಗಿ ಪರಸ್ಪರ ಬೆಂಬಲಿಸುವುದನ್ನು ಮುಂದುವರೆಸಿದರು.