ಶ್ರಾವಣದಲ್ಲಿ ಈ ಹಣ್ಣನ್ನು ಶಿವನಿಗೆ ಅರ್ಪಿಸಿದರೆ ಅದೃಷ್ಟ ಬೆಳಗುವುದು-ಸಂಪತ್ತು ತಿಜೋರಿಯಲ್ಲಿ ತುಂಬಿ ತುಳುಕುವುದು!
ಕಪ್ಪು ಉಮ್ಮತ್ತಿ, ದತ್ತೂರಿ, ಉಮ್ಮತ್ತಿ, ಧತೂರ, ಮರಳುಮ್ಮತ್ತಿ ಎಂದೆಲ್ಲಾ ಕರೆಯಲ್ಪಡುವ ಈ ಹಣ್ಣನ್ನು ಶ್ರಾವಣ ಮಾಸದಲ್ಲಿ ಮಹಾದೇವನಿಗೆ ಅರ್ಪಿಸಿದರೆ, ಸಂಕಷ್ಟವೆಲ್ಲಾ ದೂರವಾಗಿ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಜೊತೆಗೆ ಸಂಪತ್ತು ತಿಜೋರಿ ತುಂಬುವುದು ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಸೋಮವಾರದಂದು ಮನೆಯಲ್ಲಿ ಉಮ್ಮತ್ತಿ ಬೇರನ್ನು ಇಟ್ಟು ಪೂಜಿಸಿ. ಈ ವೇಳೆ ಮಂತ್ರವನ್ನು 108 ಬಾರಿ ಪಠಿಸಿದರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉಮ್ಮತ್ತಿಯನ್ನು ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಅರ್ಪಿಸಿದರೆ ಸಂತಾನ ಭಾಗ್ಯ ಕರುಣಿಸುತ್ತಾನೆ ಮಹಾದೇವ.
ಶಾಸ್ತ್ರಗಳ ಪ್ರಕಾರ ಶ್ರಾವಣ ಮಾಸದ ಆಶ್ಲೇಷ ನಕ್ಷತ್ರದಲ್ಲಿ ಉಮ್ಮತ್ತಿಯನ್ನು ತಂದು ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ಹೀಗೆ ಮಾಡಿದರೆ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ
ಶಾಸ್ತ್ರಗಳ ಪ್ರಕಾರ, ಶ್ರಾವಣ ಮಾಸದಲ್ಲಿ, ಭಾನುವಾರ ಅಥವಾ ಮಂಗಳವಾರದಂದು ಮನೆಯಲ್ಲಿ ಕಪ್ಪು ಉಮ್ಮತ್ತಿಯನ್ನು ಇಡುವುದರಿಂದ ದುಷ್ಟ ಶಕ್ತಿಗಳ ಸಮಸ್ಯೆ ನಿವಾರಣೆಯಾಗುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)