ಅಮಿತಾಬ್ ಯಶಸ್ಸಿನ ಹಿಂದಿರುವ ಮಹಿಳೆ ಈಕೆ.. ಜಯಾ ಬಚ್ವನ್‌ ಅಲ್ಲ, ಇವರನ್ನು ಕೇಳಿಯೇ ಸಿನಿಮಾಗೆ ಸಹಿ ಹಾಕ್ತಾರಂತೆ ಬಿಗ್‌ ಬಿ!

Wed, 07 Aug 2024-9:28 am,

ಅಮಿತಾಬ್ ಬಚ್ಚನ್ 1966ರಲ್ಲಿ ಸಾತ್ ಹಿಂದೂಸ್ತಾನಿ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲ ಚಿತ್ರ ದೊಡ್ಡ ಫ್ಲಾಪ್ ಕಂಡಿತು. ನಂತರ ಅವರು ನಟನೆಯನ್ನು ತ್ಯಜಿಸಲು ನಿರ್ಧರಿಸಿದ್ದರಂತೆ.

ಅಮಿತಾಬ್ ವೃತ್ತಿಜೀವನದ ಆರಂಭದಲ್ಲಿಯೇ ಸತತ 13 ಫ್ಲಾಪ್ ಗಳನ್ನು ಕೊಟ್ಟರು. 1973 ರಲ್ಲಿ ‘ಜಂಜೀರ್’ ಚಿತ್ರದ ಮೂಲಕ ಭಾರೀ ಸ್ಟಾರ್‌ ನಟನಾದರು. 

ಸೂಪರ್ ಸ್ಟಾರ್ ಆದ ಬಳಿಕ ಅಮಿತಾಬ್ ಈ ಮಹಿಳೆಯನ್ನ ಕೇಳಿಯೇ ತಮ್ಮ ಸಿನಿಮಾಗಳಿಗೆ ಸಹಿ ಹಾಕ್ತಾರೆ ಎಂಬ ವಿಚಾರ ಹೊರಬಿದ್ದಿದೆ.

2018ರಲ್ಲಿ ತಮ್ಮ ಮಗಳು ಶ್ವೇತಾ ನಂದಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್‌ ಈ ಸೀಕ್ರೆಟ್ ರಿವೀಲ್ ಮಾಡಿದ್ದರು. 

"ಮಗಳು ಶ್ವೇತಾ ದೊಡ್ಡವಳಾದ ಬಳಿಕ ಯಾವುದೇ ಸಿನಿಮಾಗೆ ಸಹಿ ಹಾಕುವ ಮೊದಲು ನಾನು ಅವಳನ್ನೇ ಕೇಳೋದು" ಎಂದು ಬಿಗ್‌ ಬಿ ಹೇಳಿದ್ದಾರೆ.

ಶ್ವೇತಾ ಏನು ಹೇಳಿದರೂ ಅದು ನಿಜವಾಗುತ್ತೆ ಎಂದು ಅಮಿತಾಬ್ ನಂಬುತ್ತಾರಂತೆ. ತಾವು ಮಾಡುವ ಪ್ರತಿಯೊಂದು ಸಿನಿಮಾ ಬಗ್ಗೆ ಶ್ವೇತಾ ಬಳಿಯೇ ಬಿಗ್‌ ಬಿ ಸಲಹೆ ಪಡೀತಾರಂತೆ. ಚಿತ್ರಗಳಿಗೆ ಸಹಿ ಹಾಕುವಲ್ಲಿ ಶ್ವೇತಾ ನನಗೆ ಸಹಾಯ ಮಾಡುತ್ತಾರೆ ಎಂದು ಅಮಿತಾಬ್‌ ಹೇಳಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link