ಈ ಸ್ಟಾರ್‌ ನಟಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ! ಪ್ರೀತಿಯ ಹುಚ್ಚಿನ್ನಲ್ಲಿ ಈತ ಮಾಡಿದ್ದು ಎಂತಹ ಕೆಲಸ ಗೊತ್ತಾ..?

Thu, 17 Oct 2024-7:54 am,

Dawood Ibrahim Lovestory: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಅವರಿಗೆ ಹಲವಾರು ಬಾಲಿವುಡ್‌ ನಟಿಯರ ಜೊತೆ ಸಂಪರ್ಕವಿರುವುದು ಗೊತ್ತೆ ಇದೆ. ಆದರೆ ಈತ ಒಂದು ಬಾಲಿವುಡ್‌ ನಟಿಯ ಬೆನ್ನ ಹಿಂದೆ ಬಿದ್ದಿದ್ದ, ಆಕೆಯನ್ನು ಹುಚ್ಚನಂತೆ ಪ್ರತೀಸುತ್ತಿದ್ದ, ಅಷ್ಟಕ್ಕೂ ಆ ನಟಿ ಯಾರು ಗೊತ್ತಾ? ತಿಳಿಯಲು ಮುಂದೆ ಓದಿ...  

ಒಂದು ಕಾಲದಲ್ಲಿ ಬಾಲಿವುಡ್ ಮತ್ತು ಭೂಗತ ಜಗತ್ತು ನಡುವೆ ನಿಕಟವಾದ ಸಂಬಂಧವಿತ್ತು. ಸೆಲೆಬ್ರಿಟಿಗಳು ಭೂಗತ ಜಗತ್ತಿನೊಂದಿಗೆ ಸ್ನೇಹ, ಸಂಪರ್ಕ ಹೊಂದಿದ್ದರು. ಇದರಿಂದಾಗಿ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಭೂಗತ ಜಗತ್ತಿನೊಂದಿಗಿನ ಸ್ನೇಹವು ಅನೇಕ ಪ್ರಸಿದ್ಧ ವ್ಯಕ್ತಿಗಳಿಗೆ ದುಬಾರಿಯಾಗಿ ಪರಿಣಮಿಸಿತು.   

ಭೂಗತ ಪಾತಕಿಗಳೊಂದಿಗಿನ ನಟಿಯರ ಸ್ನೇಹ ಮಾತ್ರ ತುಂಬಾ ಭಯಾನಕವಾಗಿತ್ತು, ತಮ್ಮ ಚಿತ್ರದಲ್ಲಿ ನಟಿಗೆ ಅವಕಾಶ ಕೊಡಲಿಲ್ಲವೆಂಬ ಕಾರಣಕ್ಕೆ ನಿರ್ಮಾಪಕರೊಬ್ಬರು ಜೀವನವನ್ನು ಕಳೆದುಕೊಳ್ಳಬೇಕಾಯಿತು. ಅಷ್ಟಕ್ಕೂ ಸಿನಿಮಾದಿಂದ ನಿರಕಾರಿಸಲ್ಪಟ್ಟ ಆ ನಟಿ ಬೇರಾರೂ ಅಲ್ಲ, ಅನಿತಾ ಅಯೂಬ್‌.  

ಅನಿತಾ ಅಯೂಬ್ ಪಾಕಿಸ್ತಾನದ ನಿವಾಸಿ. ಪಾಕಿಸ್ತಾನದಲ್ಲಿ ಓದಿದ ನಂತರ ಮಾಡೆಲಿಂಗ್ ಮಾಡಲು ಭಾರತಕ್ಕೆ ಬಂದಿದ್ದರು. ಭಾರದಲ್ಲಿ ಹಲವು ಜಾಹೀರಾತುಗಳು ಮತ್ತು ಮಾಡೆಲಿಂಗ್ ಮಾಡಿದ ನಂತರ ಅನಿತಾ ಬಾಲಿವುಡ್ ಪ್ರವೇಶಿಸಿದರು. ದೇವ್ ಆನಂದ್ ಅವರ ಪ್ಯಾರ್ ಕಾ ತರಾನಾ ಚಿತ್ರದ ಮೂಲಕ ಬಾಲಿವುಡ್‌ ಫಿಲಿಂ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು.   

ಈ ಸಿನಿಮಾದ ನಂತರ ಇವರು, ಅನೇಕ ಚಿತ್ರಗಳಲ್ಲಿ ನಟಿಸಿದರು. ಅನಿತಾ ದೇವ್ ಆನಂದ್ ಜೊತೆ 'ಗ್ಯಾಂಗ್‌ಸ್ಟರ್' ಚಿತ್ರದಲ್ಲಿ ಕೆಲಸ ಮಾಡಿದ್ದರು. ಹೀಗೆ ಸಿನಿಮಾಗಳಲ್ಲಿ ನಟಿಸುತ್ತಾ ಸಕ್ರಿಯರಾಗುತ್ತಿದ್ದಂತೆ, ದಾವೂದ್ ಇಬ್ರಾಹಿಂ ಜೊತೆಗಿನ ಸಂಬಂಧದ ಸುದ್ದಿಗಳು ಹೊರ ಬರಲಾರಂಭಿಸಿದ್ದವು. ಆದರೆ ದಾವೂದ್ ಜೊತೆಗಿನ ಸಂಬಂಧವನ್ನು ಅನಿತಾ ಒಪ್ಪಿಕೊಳ್ಳಲೇ ಇಲ್ಲ .   

ದಾವುದ್ ವಿಚಾರ ಪ್ರಸ್ತಾಪಿಸಿದಾಗೆಲ್ಲ ನಟಿ ಈ ವಿಚಾರವನ್ನು ನಿರಾಕರಿಸುತ್ತಿದ್ದಳು. ಆದರೆ ಅನಿತಾ ಅವರ ಬಾಲಿವುಡ್ ವೃತ್ತಿಜೀವನ, ದಾವೂದ್ ಇಬ್ರಾಹಿಂ ಜೊತೆಗಿನ ಸ್ನೇಹ ವಿಶೇಷವೇನಾಗಿರಲಿಲ್ಲ.   

ವರದಿಗಳನ್ನು ನಂಬುವುದಾದರೆ, ಜನಪ್ರಿಯ ನಿರ್ಮಾಪಕ ಜಾವೇದ್ ಸಿದ್ದಿಕಿ ಅನಿತಾ ಅವರನ್ನು ತಮ್ಮ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರು, ಇದೇ ಕಾರಣಕ್ಕಾಗಿ ದಾವೂದ್‌ ಇಬ್ರಹಿಂ ನಿರ್ಮಾಪಕನನ್ನು ಕೊಂದು ಮುಗಿಸಿದ್ದ.   

ನಟಿ ಅನಿತಾ, ತಮ್ಮ ಸಿನಿಮಾಗಳಿಗಿಂತ, ಹೊರಗಿನ ವಿಚಾರಗಳಲ್ಲಿ ಸುದ್ದಿಯಲ್ಲಿದ್ದುದ್ದೇ ಹೆಚ್ಚು. ಪಾಕಿಸ್ತಾನಕ್ಕಾಗಿ ಭಾರತದಲ್ಲಿ ಬೇಹುಗಾರಿಕೆ ನಡೆಸಿದ ಆರೋಪವೂ ನಟಿಯ ಮೇಲಿತ್ತು. ಪಾಕಿಸ್ತಾನದ ನಿಯತಕಾಲಿಕೆಯಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ಅದರಲ್ಲಿ ಅನಿತಾ ಪಾಕಿಸ್ತಾನದ ಗೂಢಚಾರಿಕೆ ಎಂದು ಜನರು ಭಾವಿಸಿದ್ದಾರೆ ಎಂದು ಬರೆಯಲಾಗಿತ್ತು. ಆ ಬಳಿಕ ನಟಿಯನ್ನು  ಬಾಲಿವುಡ್‌ನಿಂದ ಬಹಿಷ್ಕರಿಸಲಾಯಿತು, ಇಷ್ಟಲ್ಲಾ ಆದ ಮೇಲೆ ನಟಿ ಭಾರತವನ್ನು ತೊರದು ತಮ್ಮ ದೇಶವಾದ ಪಾಕಿಸ್ತಾನಕ್ಕೆ ಹಿಂತಿರುಗಿದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link