Dearness Allowance: ಸರ್ಕಾರಿ ನೌಕರರ DA ನಲ್ಲಿ ಶೇ.25ರಷ್ಟು ಏರಿಕೆ! ಜುಲೈನಲ್ಲಿ ಸಿಗಲಿವೆ ಬಾಕಿ ಉಳಿದ 3 ಕಂತು
1. DA ತಡೆಹಿಡಿಯುವಿಕೆಯಿಂದ ಸರ್ಕಾರಕ್ಕಾದ ಉಳಿತಾಯ ಏನು? - ಈ ಕುರಿತು ರಾಜ್ಯಸಭೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಕೇಂದ್ರ ಸರ್ಕಾರ, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಜನವರಿ 1, 2020, ಜುಲೈ 1, 2020 ಹಾಗೂ ಜನವರಿ 1, 2021ರಿಂದ ತಡೆಹಿಡಿಯಲಾಗಿದೆ. ನೌಕರರಿಗೆ DA ಪಾವತಿಯಾಗದ ಕಾರಣ 37,430.09 ಕೋಟಿ ರೂ. ಉಳಿತಾಯ ಮಾಡಲಾಗಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಈ ಹಣವನ್ನು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವ್ಯಯಿಸಲಾಗುವುದು ಎಂದು ಅವರು ಹೇಳಿದ್ದಾರೆ.
2 ತುಟ್ಟಿಭತ್ಯೆ ದರಗಳಲ್ಲಿ ಪರಿಷ್ಕರಣೆ - ಕಳೆದ ವರ್ಷ ಸರ್ಕಾರಿ ನೌಕರರಿಗೆ ಶೇ.17 ರಷ್ಟು ತುಟ್ಟಿಭತ್ಯೆ ಲಭಿಸುತ್ತು. ಜನವರಿ 2020ರಲ್ಲಿ ಅದನ್ನು ಶೇ.4ರಷ್ಟು ಹೆಚ್ಚುಸುವ ನಿರ್ಣಯ ಕೈಗೊಳ್ಳಲಾಗಿತ್ತು. ಅಂದರೆ, ಜನವರಿವರೆಗೆ DA ದರ ಶೇ.21ಕ್ಕೆ ಬಂದು ತಲುಪಿತ್ತು. ಒಂದು ವೇಳೆ ಜನವರಿ 1, 2021ರಲ್ಲಿಯೂ ಕೂಡ ಶೇ.4 ರಷ್ಟು DA ಹೆಚ್ಚಾದರೆ, ಒಟ್ಟು DA ಹೆಚ್ಚಳ ಶೇ.25 ರಷ್ಟಾಗಲಿದೆ. ಆದರೆ, ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲ. ಇದಲ್ಲದೆ ಏಳನೇ ವೇತನ ಆಯೋಗದ ಪ್ರಕಾರ ಸರ್ಕಾರಿ ನೌಕರರ ಟ್ರಾವೆಲ್ ಅಲ್ಲೌನ್ಸ್ ಅಂದರೆ TA ಕೂಡ ಏರಿಕೆಯಾಗಲಿದೆ.
3. Family Pension ವ್ಯಾಪ್ತಿ ಕೂಡ ಹೆಚ್ಚಾಗಲಿದೆ - ಇತ್ತೀಚೆಗಷ್ಟೇ ಈ ಕುರಿತು ನಿರ್ಣಯ ಪ್ರಕಟಿಸಿರುವ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಫ್ಯಾಮಿಲಿ ಪೆನ್ಷನ್ ವ್ಯಾಪ್ತಿಯನ್ನು ಕೂಡ 45ಸಾವಿರ ರೂ.ಗಳಿಂದ 1.25 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ವಾಸ್ತವದಲ್ಲಿ ಪೆನ್ಶನ್ ಹಾಗೂ ಪೆನ್ಷನ್ ಧಾರಕ ಕಲ್ಯಾಣ ವಿಭಾಗ ಮೃತ ಸರ್ಕಾರಿ ನೌಕರರ ಮಕ್ಕಳು /ಸಹೋದರ-ಸಹೋದರಿಯರಿಗೆ ನೀಡಲಾಗುವ ಪೆನ್ಷನ್ ಕುರಿತು ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.