Death Indications - ಸಾವಿಗೂ ಮುನ್ನ ಸಿಗುತ್ತವೆ ಈ 6 ಸಂಕೇತಗಳು, ಶರೀರದಲ್ಲಿಯೂ ಕೂಡ ಬದಲಾವಣೆಗಳಾಗುತ್ತವೆ

Wed, 11 Aug 2021-11:46 am,

1. ಪ್ರತಿಬಿಂಬ ಕಾಣಿಸದಿರುವುದು - ಶಿವಪುರಾಣದ ಪ್ರಕಾರ ವ್ಯಕ್ತಿಯ ಸಾವು ಹತ್ತಿರ ಬಂದಾಗ ಅವನಿಗೆ ತನ್ನ ಪ್ರತಿಬಿಂಬ ಕಾಣಿಸುವುದಿಲ್ಲ ಎನ್ನಲಾಗಿದೆ. ಅವನಿಗೆ ನೀರು , ಕನ್ನಡಿ ಯಾವುದರಲ್ಲೂ ಕೂಡ ಆತನ ಪ್ರತಿಬಿಂಬ ಕಾಣಿಸುವುದಿಲ್ಲ .

2. ಶರೀರದಲ್ಲಾಗುತ್ತವೆ ಬದಲಾವಣೆ - ವ್ಯಕ್ತಿಯ ನಾಲಿಗೆ, ಮೂಗು, ಬಾಯಿ, ಕಿವಿ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಶೀಘ್ರವೇ ಸಾವು ಸಂಭವಿಸಲಿದೆ ಎಂಬುದರ ಸಂಕೇತವದು. ಶರೀರ ಬಿಳಿ ಬಣ್ಣಕ್ಕೆ ತಿರುಗುವುದು ಹಾಗೂ ನೀಲಿ ಬಣ್ಣಕ್ಕೆ ತಿರುಗುವುದು ಕೂಡ ಸಾವಿನ ಸಂಕೇತ.

3. ಸೂರ್ಯ ಕಪ್ಪಾಗಿ ಕಾಣಿಸುವುದು - ವ್ಯಕ್ತಿಗೆ ಸೂರ್ಯ ಹಾಗೂ ಚಂದ್ರರು ಕಪ್ಪಾಗಿ ಕಾಣಿಸಲು ಆರಂಭಿಸಿದರೆ ಹಾಗೂ ಹೊಳೆಯುವ, ಕೆಂಪು, ಕಪ್ಪು ಬಣ್ಣದ ಆವೃತ್ತಿ ಕಾಣಿಸಿಕೊಳ್ಳಲು ಆರಂಭಿಸಿದರೆ ಕೆಲವೇ ಸಮಯದಲ್ಲಿ ಆತನ ಮೃತ್ಯು ಸಂಭವಿಸಲಿದೆ ಎಂಬುದರ ಸಂಕೇತವದು.

4. ಬೆಂಕಿಯ ಜ್ವಾಲೆ ಕಾಣಿಸದಿರುವುದು - ಒಂದು ವೇಳೆ ವ್ಯಕ್ತಿಗೆ ಎಲ್ಲವೂ ಕಾಣಿಸಿಕೊಳ್ಳುತ್ತಿದ್ದು, ಬೆಂಕಿಯಿಂದ ಪ್ರಜ್ವಲಿಸುವ ಜ್ವಾಲೆ ಕಾಣಿಸಿಕೊಳ್ಳದಿದ್ದರೆ. ಆತನ ಸಾವು ಸಮೀಪಿಸಿದೆ ಎಂಬುದರ ಸಂಕೇತ.

5. ಪಾರಿವಾಳ ತಲೆಯ ಮೇಲೆ ಕುಳಿತುಕೊಳ್ಳುವುದು - ವ್ಯಕ್ತಿಯ ಮೇಲೆ ಗಿಡುಗ, ಪಾರಿವಾಳ ಅಥವಾ ಕಾಗೆ ಬಂದು ಕೂರುವುದು ಆ ವ್ಯಕ್ತಿಯ ಆಯಸ್ಸು ಕಡಿಮೆಯಾಗಿರುವ ಸಂಕೇತ. ಇನ್ನೊಂದೆಡೆ ನೀಲಿ ಬಣ್ಣದ ನೊಣಗಳು ವ್ಯಕ್ತಿಯನ್ನು ಆವರಿಸಿದರೆ ಆತನ ಸಾವು ಸಂಭವಿಸಿದೆ ಎಂದರ್ಥ.

6. ಸೌರ ಮಂಡಲ - ವ್ಯಕ್ತಿಯ ಸಾವು ಹತ್ತಿರವಾದಾಗ ಆತನಿಗೆ ಸೌರಮಂಡಲದಲ್ಲಿ ಧ್ರುವ ನಕ್ಷತ್ರ ಸೇರಿದಂತೆ ಯಾವುದೇ ಇತರ ನಕ್ಷತ್ರ ಕಾಣಿಸುವುದಿಲ್ಲ. ರಾತ್ರಿಯ ಹೊತ್ತಿನಲ್ಲಿ ಆಕಾಶದಲ್ಲಿ ಕಾಮನಬಿಲ್ಲು ಹಾಗೂ ದಿನದ ಅವಧಿಯಲ್ಲಿ ಉಲ್ಕಾಪಾತ ಕಾಣಿಸಲಾರಂಭಿಸುತ್ತವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link