Russia - Ukraine war Photos: ಈ 6 ತಿಂಗಳಲ್ಲಿ ನಡೆದ ಸಾವು, ನೋವು.. ಕರುಳು ಹಿಂಡುವಂತಿವೆ ಈ ದೃಶ್ಯಗಳು
Russia Ukraine war : ರಷ್ಯಾ-ಉಕ್ರೇನ್ ಕದನಕ್ಕೆ 6 ತಿಂಗಳು ಪೂರ್ಣಗೊಂಡಿದ್ದು, ಆದರೂ ಈ ಯುದ್ಧ ಯಾವುದೇ ನಿರ್ಣಾಯಕ ಹಂತ ತಲುಪಿಲ್ಲ.
Russia Ukraine war : ಕೀವ್, ಖಾರ್ಕೀವ್‌ನಿಂದ ರಷ್ಯಾ ಪಡೆಯನ್ನು ಉಕ್ರೇನ್ ಹೊರಗಟ್ಟಿದ್ದು, ಡೊನ್‌ಬಾಸ್, ಮರಿಯುಪೋಲ್ ರಷ್ಯಾ ವಶದಲ್ಲಿದೆ.
Russia Ukraine war : ಸುಲಭ ಜಯದ ನಿರೀಕ್ಷೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಫೆಬ್ರವರಿ 24 ರಂದು ಅಪ್ರಚೋದಿತ ಯುದ್ಧ ಸಾರಿದ್ದರು.
Russia Ukraine war : 2ನೇ ಮಹಾಯುದ್ಧ ಬಳಿಕ ನಡೆದ ಅತಿದೊಡ್ಡ ಯುದ್ಧ ಎನಿಸಿಕೊಂಡಿತು ಈ ರಷ್ಯಾ - ಉಕ್ರೇನ್ ಸಮರ.
Russia Ukraine war : ಕಳೆದ 6 ತಿಂಗಳ ಹಿಂದೆ ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ಈಗಾಗಲೇ ಬಹುತೇಕ ಪ್ರದೇಶಗಳನ್ನು ವಶಕ್ಕೆ ಪಡೆದಿದೆ.
Russia Ukraine war : ಉಕ್ರೇನ್‍ನ ಪ್ರತಿಹೋರಾಟದ ನಡುವೆ ಕೀವ್ ಸೇರಿದಂತೆ ಕೆಲ ನಗರಗಳು ಉಳಿದುಕೊಂಡಿವೆ.
Russia Ukraine war : ಆದರೆ ಪ್ರತಿನಿತ್ಯ ರಷ್ಯಾ ಸೈನ್ಯ ಆಗೊಂದು ಈಗೊಂದು ಸಣ್ಣಪುಟ್ಟ ದಾಳಿ ಮಾಡುತ್ತಿವೆ.
Russia Ukraine war : ಪಾಶ್ಚಿಮಾತ್ಯ ನಿರ್ಬಂಧಗಳ ಪರಿಣಾಮವಾಗಿ ರಷ್ಯಾ ಕೂಡ ನರಳುತ್ತಿದೆ, ಆದರೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ನಿಲುವನ್ನು ಹಿಂತೆಗೆದುಕೊಂಡಿಲ್ಲ.
Russia Ukraine war : ಸೋವಿಯತ್ ಅಳ್ವಿಕೆಯಿಂದ ಹೊರಬಂದು ಸ್ವಾತಂತ್ರ್ಯ ಪಡೆದ ಉಕ್ರೇನ್‍ಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಸಹ ರಷ್ಯಾ ಅವಕಾಶ ಕೊಡಲಿಲ್ಲ.
Russia - Ukraine war : ಈ ಆರು ತಿಂಗಳುಗಳಲ್ಲಿ ಯುದ್ಧ ತಂದಿಟ್ಟ ಅನಾಹುತ ಅಷ್ಟಿಷ್ಟಲ್ಲ. ಸಾವು, ನೋವು ತುಂಬಿದ ಈ ಯುದ್ಧದ ದೃಶ್ಯಗಳು ಕಣ್ಣಾಲೆಯನ್ನು ಒದ್ದೆ ಮಾಡುತ್ತವೆ.